ಭಾಗಲ್ಪುರ(ಬಿಹಾರ):ಚಲಿಸುತ್ತಿದ್ದ ರೈಲಿನಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಪ್ರಯಾಣಿಕರು ಕಿಟಕಿಗೆ ನೇತುಹಾಕಿದ ಘಟನೆ ಬಿಹಾರದ ಭಾಗಲ್ಪುರದಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಬೇಗುಸರಾಯ್‌ನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಇದೀಗ ಭಾಗಲ್ಪುರದಲ್ಲೂ ಕಳ್ಳನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ನೇತಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಚಲಿಸುತ್ತಿರುವ ರೈಲಿನ ಕಿಟಕಿ ಹೊರಗೆ ಕಳ್ಳ ನೇತಾಡುತ್ತಿರುವುದು ಮತ್ತು ಪ್ರಯಾಣಿಕರು ಒಳಗಿನಿಂದ ಆತನನ್ನು ಹಿಡಿದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲ ಸಮಯದ ಬಳಿಕ ಜನರು ಕಳ್ಳನನ್ನು ಒಳಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ಜಮಾಲ್‌ಪುರ ಸಾಹಿಬ್‌ಗಂಜ್ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದೆ.
ಕಳ್ಳನ ಹಿಡಿದು ರೈಲಿನ ಕಿಟಕಿ ಹೊರಗಿಂದ 5 ಕಿಮೀ ನೇತಾಡಿಸಿದ ಪ್ರಯಾಣಿಕರು ಕಳ್ಳನು ರೈಲಿನಿಂದ ಮೊಬೈಲ್ ಕದ್ದುಕೊಂಡು ಓಡಿಹೋಗುವಾಗ ಪ್ರಯಾಣಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಳ್ಳನನ್ನು ಹಿಡಿದು ರೈಲಿನೊಳಗೆ ಎಳೆದೊಯ್ದ ಪ್ರಯಾಣಿಕರು ಆತನಿಗೆ ಗೂಸಾ ನೀಡಿದ್ದಾರೆ. ಬಳಿಕ ಖದೀಮನಿಗೆ ರೈಲಿನ ಹೊರಗೆ ನೇತಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ವೇಳೆ ಕಳ್ಳ ತನ್ನ ಕೈ ಬಿಡಬೇಡಿ, ಕೈಬಿಟ್ಟರೆ ನಾನು ಸಾಯುತ್ತೇನೆ ಎಂದು ಪ್ರಯಾಣಿಕರ ಬಳಿ ಮನವಿ ಮಾಡಿದ್ದಾನೆ. ಬಳಿಕ ಕಳ್ಳನನ್ನು ಒಳಗೆ ಎಳೆದೊಯ್ದು ಥಳಿಸಲಾಗಿದೆ.
ಸುಮಾರು 5 ಕಿ.ಮೀ.ವರೆಗೆ ಕಳ್ಳ ನೇತಾಡಿಕೊಂಡೇ ಪ್ರಯಾಣಿಸಿದ್ದಾನೆ. ಈ ಘಟನೆಯು ಭಾಗಲ್ಪುರದ ಲೈಲಾಖ್ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ವೈರಲ್ ಆಗಿದೆ. ಜನರಿಂದ ತಪ್ಪಿಸಿಕೊಳ್ಳಲು ಖದೀಮನು ಹಲವು ಬಾರಿ ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಬಳಿಕ ಆತನನ್ನು ಕಹಲ್‌ಗಾಂವ್‌ನಲ್ಲಿ ಆರ್‌ಪಿಎಫ್ ಸಿಬ್ಬಂದಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು..! ವಿಡಿಯೋ