ಭೋಪಾಲ್ (ಮಧ್ಯಪ್ರದೇಶ): ಕೊರೊನಾ ಯುಗದಲ್ಲಿ ಎಲ್ಲವೂ ಕಳೆದು ಹೋಯಿತು. ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ ಬಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದರು ಮತ್ತು ಆನ್‌ಲೈನ್ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಅನುಕೂಲವಂತರ ಮಕ್ಕಳು ಮಾತ್ರ ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿದ್ದರು. ಹಳ್ಳಿಗಳ ಬಡ ಮಕ್ಕಳು ಅಸಹಾಯಕರಾಗಿದ್ದರು. ಈ ಮಕ್ಕಳಿಗಾಗಿ, ಸಾಗರದ ಶಿಕ್ಷಕ ಚಂದ್ರಹಾಸ್ ಶ್ರೀವಾಸ್ತವ್ ಅವರಿಗೆ ಭರವಸೆಯ ಮುನ್ನುಡಿಯಾಗಿ ಹೊರ ಹೊಮ್ಮಿದ್ದಾರೆ.
ಸ್ಕೂಟರ್ನಲ್ಲಿ ಬರುವ ಈ ಮೇಷ್ಟ್ರು ಮತ್ತು ಅವರ ಸ್ಕೂಟರ್ ಶಾಲೆ ಸದ್ಯ ಎಲ್ಲೆಡೆ ಸುದ್ದಿಯಲ್ಲಿದೆ. ಸುಮಾರು ಒಂದು ವರ್ಷದಿಂದ ಈ ಚಂದ್ರಹಾಸ್ ಗ್ರಾಮಕ್ಕೆ ಬರುತ್ತಿದ್ದಾರೆ. ಸರ್ಕಾರಿ ಶಾಲೆ ಮುಚ್ಚಿದ ನಂತರ ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಇವರು ಬೆನ್ನೆಲುಬಾಗಿದ್ದಾರೆ. ಕೊರೊನಾ ಅವಧಿಯಲ್ಲಿ ಶಾಲೆಗೆ ಹೋಗದ ಬಡ ಮಕ್ಕಳಿಗೆ ಕಲಿಸುವುದು ಅವರ ಉದ್ದೇಶವಾಗಿದೆ.
ಪ್ರತಿ ಮನೆಯ ಮಕ್ಕಳು ಒಂದಡೆ ಒಟ್ಟುಗೂಡುತ್ತಾರೆ. ಅವರು ಕುಳಿತುಕೊಳ್ಳಲು ತಮ್ಮದೇ ಆದ ಮ್ಯಾಟ್ ಅಥವಾ ಚೀಲಗಳನ್ನು ತರುತ್ತಾರೆ. ಈ ಬಡ ಮಕ್ಕಳಿಗೆ ಮಾಸ್ಟರ್ ಚಂದ್ರಹಾಸ್ ಸ್ವಂತ ಖರ್ಚಿನಲ್ಲಿ ಜ್ಞಾನಾರ್ಜನೆ ಮಾಡಿಸುತ್ತಿದ್ದಾರೆ.