ಕರ್ನಾಟಕ

karnataka

ETV Bharat / bharat

'ಮಸೀದಿಗಳ ಎದುರು ಹನುಮಾನ್​ ಚಾಲೀಸಾ ಪಠಣ ಮುಂದುವರೆಯಲಿದೆ': ರಾಜ್​ ಠಾಕ್ರೆ

ಮುಂಬೈನಲ್ಲಿರುವ 135 ಮಸೀದಿಗಳು ಸುಪ್ರೀಂಕೋರ್ಟ್​ ಆದೇಶ ಉಲ್ಲಂಘನೆ ಮಾಡಿವೆ. ಇದರ ಬಗ್ಗೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನ ಕಾಯ್ದು ನೋಡಬೇಕಿದೆ ಎಂದು ರಾಜ್ ಠಾಕ್ರೆ ತಿಳಿಸಿದರು.

Raj Thackeray
Raj Thackeray

By

Published : May 4, 2022, 4:12 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಕೆಲ ಮಸೀದಿಗಳಿಂದ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಹೀಗಾಗಿ ಅವುಗಳ ಎದುರು ಹನುಮಾನ್​ ಚಾಲೀಸಾ ಪಠಣ ಮುಂದುವರೆಯಲಿದೆ ಎಂದು ಎಂಎನ್​ಎಸ್​ ಮುಖ್ಯಸ್ಥ ರಾಜ್ ಠಾಕ್ರೆ ಘೋಷಣೆ ಮಾಡಿದ್ದಾರೆ. ಹನುಮಾನ್​ ಚಾಲೀಸಾ ಪಠಣ ಕೇವಲ ಒಂದು ದಿನದ ವಿಚಾರ ಅಲ್ಲ. ಮಸೀದಿಗಳ ಮೇಲಿರುವ ಧ್ವನಿವರ್ಧಕ ತೆರವುಗೊಳಿಸುವವರೆಗೂ ಅವುಗಳ ಮುಂದೆ ಹನುಮಾನ್ ಚಾಲೀಸಾ ಪಠಣ ಹೋರಾಟ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಶೇ. 90ರಿಂದ 92ರಷ್ಟು ಮಸೀದಿಗಳು ಇಂದು ಬೆಳಗ್ಗೆ ಧ್ವನಿವರ್ಧಕಗಳ ಮೂಲಕ ಆಜಾನ್ ಪಠಣ ಮಾಡಿಲ್ಲ. ಆದರೆ, ಕೆಲ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಕೇಳಿ ಬಂದಿದೆ. ಇವುಗಳ ವಿರುದ್ಧ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಟೆರೇಸ್‌ ಮೇಲೆ ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸಾ ಪಠಿಸಿದ ಎಂಎನ್‌ಎಸ್‌

ಕೇವಲ ಮಸೀದಿಗಳಲ್ಲಿ ಮಾತ್ರವಲ್ಲ, ಕೆಲ ದೇವಸ್ಥಾನಗಳಲ್ಲೂ ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡಲಾಗ್ತಿದೆ. ಅಕ್ರಮವಾಗಿ ಧ್ವನಿವರ್ಧಕ ಬಳಕೆ ಮಾಡುವ ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಇವುಗಳನ್ನ ತೆರವುಗೊಳಿಸಬೇಕು ಎಂದರು. ಧ್ವನಿವರ್ಧಕ ಬಳಕೆ ಧಾರ್ಮಿಕವಾದುದಲ್ಲ. ನಾನು ಆಜಾನ್​ ವಿರುದ್ಧ ಇಲ್ಲ. ಬದಲಾಗಿ ಧ್ವನಿವರ್ಧಕಗಳ ಬಳಕೆ ವಿರುದ್ಧ ಇದ್ದೇನೆ ಎಂದರು. ಇದರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಮಸೀದಿಗಳ ಮೇಲಿರುವ ಧ್ವನಿವರ್ಧಕ ತೆರವುಗೊಳಿಸಲು ರಾಜ್ ಠಾಕ್ರೆ ಮೇ. 3ರ ಗಡುವು ನೀಡಿದ್ದರು. ಅದು ಸಾಧ್ಯವಾಗದಿದ್ದರೆ ಮಸೀದಿಗಳ ಎದುರು ಹನುಮಾನ್​ ಚಾಲೀಸಾ ಪಠಣ ಮಾಡುವುದಾಗಿ ಘೋಷಣೆ ಮಾಡಿದ್ದರು.

ABOUT THE AUTHOR

...view details