ಕರ್ನಾಟಕ

karnataka

ETV Bharat / bharat

ಫೋಟೋಕ್ಕಾಗಿ ಕ್ರಿಕೆಟ್ ಆಡಿದ ಶಾಸಕ: ಮಹಿಳಾ ಆಟಗಾರ್ತಿ ಮುಖಕ್ಕೆ ತಾಕಿದ ಚೆಂಡು, ಆಸ್ಪತ್ರೆಗೆ ದಾಖಲು - mla cricketing shot for photo

ಫೋಟೋಕ್ಕಾಗಿ ದುರ್ಗ್‌ನ ಶಾಸಕ ಅರುಣ್ ವೋರಾ ಕ್ರಿಕೆಟ್ ಆಡುತ್ತಿದ್ದಾಗ ಮಹಿಳಾ ಆಟಗಾರ್ತಿಯೊಬ್ಬರ ಮುಖಕ್ಕೆ ಚೆಂಡು ತಾಕಿ, ಗಾಯಗೊಂಡ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

cricket
ಕ್ರಿಕೆಟ್

By

Published : Dec 9, 2022, 8:57 AM IST

ಛತ್ತೀಸ್‌ಗಢ: ದುರ್ಗ್‌ನ ಶಾಸಕ ಅರುಣ್ ವೋರಾ ಅವರು ಕ್ರಿಕೆಟ್ ಆಡುತ್ತಿದ್ದಾಗ ಮಹಿಳಾ ಆಟಗಾರ್ತಿಯ ಮುಖಕ್ಕೆ ಚೆಂಡು ಬಂದು ತಾಕಿದ್ದು, ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಬುಧವಾರ ಪದ್ಮನಾಭ್‌ಪುರ ಕ್ರೀಡಾಂಗಣದಲ್ಲಿ ದುರ್ಗ್ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದುರ್ಗ್​ನ ಶಾಸಕ ಅರುಣ್ ವೋರಾ ಅವರನ್ನು ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗಿತ್ತು. ವೋರಾ ಅವರು ಕ್ರಿಕೆಟ್ ಆಡುವಾಗ ಫೋಟೋಗಳನ್ನು ಕ್ಲಿಕ್ಕಿಸುವ ಬಯಕೆ ವ್ಯಕ್ತಪಡಿಸಿದರು. ಶಾಸಕರು ಬ್ಯಾಟಿಂಗ್​ ಮಾಡುವಾಗ ಮಹಿಳಾ ಆಟಗಾರ್ತಿಯೊಬ್ಬರು ಬೌಲ್ ಮಾಡಿದರು.

ಮಹಿಳಾ ಕ್ರಿಡಾಪಟು ನಿಧಾನಗತಿಯಲ್ಲಿ ಬೌಲಿಂಗ್​ ಮಾಡಿದಾಗ, ಉತ್ಸುಕರಾದ ಶಾಸಕರು ತಮ್ಮ ಬ್ಯಾಟ್ ಅನ್ನು ಪೂರ್ಣ ವೇಗದಲ್ಲಿ ಬೀಸಿದರು. ಚೆಂಡು ನೇರವಾಗಿ ವಿಕೆಟ್‌ ಸಮೀಪ ನಿಂತಿದ್ದ ಮಹಿಳಾ ಆಟಗಾರ್ತಿಯ ಮುಖಕ್ಕೆ ಬಡಿದು, ಆಕೆ ಕುಸಿದು ಬಿದ್ದಳು. ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದಂತೆ ಶಾಕ್​ ಆದ ಶಾಸಕರು, ಬಳಿಕ ತಮ್ಮ ವಾಹನದಲ್ಲಿಯೇ ಗಾಯಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಬಳಿಕ ಅವರಿಗೆ ಐದು ಹೊಲಿಗೆ ಹಾಕಲಾಗಿದ್ದು, ಎರಡು ಹಲ್ಲುಗಳು ಮುರಿದಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ರೋಹಿತ್ ಶರ್ಮಾ 500 ಸಿಕ್ಸರ್.. ಕ್ರಿಸ್​ಗೇಲ್​ ದಾಖಲೆ ಮುರಿಯಲು ಬೇಕು 51 ಸಿಕ್ಸರ್​

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರುಣ್ ವೋರಾ, "ಮಹಿಳಾ ಆಟಗಾರ್ತಿಯೊಬ್ಬರು ಕ್ರಿಕೆಟ್ ಆಡುತ್ತಿದ್ದಾಗ ಚೆಂಡಿನ ಹೊಡೆತಕ್ಕೆ ಸಿಲುಕಿ ಗಾಯಗೊಂಡಿದ್ದರು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು" ಎಂದು ಹೇಳಿದ್ದಾರೆ.

ABOUT THE AUTHOR

...view details