ಕರ್ನಾಟಕ

karnataka

By

Published : Dec 11, 2020, 11:00 AM IST

ETV Bharat / bharat

ಡಿಡಿಸಿ ಚುನಾವಣೆ: ಜನರನ್ನು ಮತದಾನ ಮಾಡದಂತೆ ತಡೆದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್

ಅನಂತ್‌ನಾಗ್‌ ಜಿಲ್ಲೆಯ ಡಿಡಿಸಿ ಚುನಾವಣೆಯಲ್ಲಿ ಕೆಲವು ದುಷ್ಕರ್ಮಿಗಳು ಮತದಾರರು ಮತದಾನ ಮಾಡುವುದನ್ನು ತಡೆಯುತ್ತಿದ್ದು, ಅಂತವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯ ಚುನಾವಣಾ ಆಯುಕ್ತ (ಎಸ್‌ಇಸಿ) ಕೆ.ಕೆ. ಶರ್ಮಾ ತಿಳಿಸಿದ್ದಾರೆ.

Miscreants found dissuading people from voting in DDC polls in Anantnag, FIR filed
ಕೆ.ಕೆ.ಶರ್ಮಾ

ಅನಂತ್​ನಾಗ್​(ಜಮ್ಮು ಮತ್ತು ಕಾಶ್ಮೀರ): ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಜನರು ಮತದಾನದಿಂದ ದೂರ ಉಳಿಯುವಂತೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಡಿಡಿಸಿ ಚುನಾವಣೆಯ ಐದನೇ ಹಂತದ ಚುನಾವಣೆ ವೇಳೆ ಕೆಲವು ದುಷ್ಕರ್ಮಿಗಳು ಜನರು ಅನಂತ್‌ನಾಗ್‌ನಲ್ಲಿ ಮತ ಚಲಾಯಿಸುವುದನ್ನು ತಡೆಯುತ್ತಿದ್ದಾರೆ. ಮಾಧ್ಯಮಗಳು ಈ ಕುರಿತು ವರದಿ ಮಾಡಲು ಮುಂದಾದಾಗ ದುಷ್ಕರ್ಮಿಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಯತ್ನಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯ ಚುನಾವಣಾ ಆಯುಕ್ತ (ಎಸ್‌ಇಸಿ) ಕೆ.ಕೆ. ಶರ್ಮಾ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆ. 103, 147, 306 ರ ಅಡಿಯಲ್ಲಿ ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಶಾಂತಿಯುತವಾಗಿ ನಡೆದ ಐದನೇ ಹಂತದ ಡಿಡಿಸಿ ಚುನಾವಣೆಯಲ್ಲಿ ಒಟ್ಟು 37 ಸ್ಥಾನಗಳಿಗೆ ಶೇ. 51.20 ರಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಶರ್ಮಾ ಗುರುವಾರ ಮಾಹಿತಿ ನೀಡಿದ್ದಾರೆ.

ಜಮ್ಮು ವಿಭಾಗವು ಸರಾಸರಿ 66.67 ರಷ್ಟು ಮತದಾನ ದಾಖಲಿಸಿದ್ದು, ಪೂಂಚ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 71.62 ರಷ್ಟು ಮತದಾನವಾಗಿದೆ. ದೋಡಾ ಜಿಲ್ಲೆಯಲ್ಲಿ ಶೇ. 70.95 ಮತ್ತು ರಜೌರಿ ಜಿಲ್ಲೆ ಶೇ. 70.83 ರಷ್ಟು ಮತದಾನ ದಾಖಲಾಗಿದೆ. ಶೇ 60.24 ರಷ್ಟು ಮತದಾನದೊಂದಿಗೆ ಜಮ್ಮು ಅತಿ ಕಡಿಮೆ ಮತದಾನ ದಾಖಲಿಸಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details