ಅಂಬಾಲಾ:ಕೋವಿಡ್ ವೈರಸ್ ಲಸಿಕೆ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯುತ್ತಿದ್ದು, ರಾಜ್ಯದ ಆರೋಗ್ಯ ಸಚಿವ ಅನಿಲ್ ವಿಜ್ ಸ್ವಯಂಪ್ರೇರಿತವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್ - ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್ ಸುದ್ದಿ
ಸಂಶೋಧನಾ ಹಂತದಲ್ಲಿರುವ ಕೊರೊನಾ ವೈರಸ್ ಲಸಿಕೆ ಕೊವಾಕ್ಸಿನ್ನ ಮೂರನೇ ಹಂತದ ಪರೀಕ್ಷೆಯಲ್ಲಿ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲು ಲಸಿಕೆ ಹಾಕಿಸಿಕೊಂಡು, ಪರೀಕ್ಷಾರ್ಥ ಪ್ರಯೋಗದಲ್ಲಿ ಪಾಲ್ಗೊಂಡರು.
ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್
ಕೊರೊನಾ ವೈರಸ್ ವಿರುದ್ಧ ಹೋರಾಡಲು ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಇಂದಿನಿಂದ ಮೂರನೇ ಹಂತದ ಪ್ರಯೋಗ ಆರಂಭವಾಗಿದೆ.
ಮೊದಲ ಲಸಿಕೆ ಪ್ರಯೋಗವನ್ನು ನನ್ನ ಮೇಲೆ ಪ್ರಯೋಗಿಸುವಂತೆ ನಾನು ಕೊವಾಕ್ಸಿನ್ ಕಂಪನಿಗೆ ಮನವಿ ಮಾಡಿದ್ದೇನೆ. ಅವರು ಇದಕ್ಕೆ ಒಪ್ಪಿದ್ದಾರೆ ಎಂದು ಅನಿಲ್ ವಿಜ್ ಈ ಹಿಂದೆ ಟ್ವೀಟ್ ಮಾಡಿದ್ದರು.