ಕರ್ನಾಟಕ

karnataka

ETV Bharat / bharat

ಒಮಿಕ್ರಾನ್‌ ಹೆಚ್ಚಳ: ಜಾರ್ಖಂಡ್‌ನಲ್ಲಿ ಜ.15ರವರೆಗೆ ಮಿನಿ ಲಾಕ್‌ಡೌನ್‌ ಜಾರಿ - mini lockdown implemented in jharkhand

Mini lockdown imposed in Jharkhand: ಜಾರ್ಖಂಡ್‌ನಲ್ಲಿ ಒಮಿಕ್ರಾನ್‌ ಪ್ರಕರಣಗಳ ಹೆಚ್ಚಳಕ್ಕೆ ಕಡಿವಾಣ ಹಾಕುವ ಸಲುವಾಗಿ ಜನವರಿ 15ರ ವರೆಗೆ ಮಿನಿ ಲಾಕ್‌ಡೌನ್‌ ಘೋಷಿಸಲಾಗಿದೆ.

mini lockdown implemented in jharkhand
ಒಮಿಕ್ರಾನ್‌ ಎಫೆಕ್ಟ್‌; ಜಾರ್ಖಂಡ್‌ನಲ್ಲಿ ಜ.15ರವರೆಗೆ ಮಿನಿ ಲಾಕ್‌ಡೌನ್‌ ಜಾರಿ

By

Published : Jan 3, 2022, 7:02 PM IST

ರಾಂಚಿ(ಜಾರ್ಖಂಡ್‌): ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಾರ್ಖಂಡ್‌ನಲ್ಲಿ ಜನವರಿ 15ರ ವರೆಗೆ ಮಿನಿ ಲಾಕ್‌ಡೌನ್‌ಗೆ ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಈ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳು, ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣಗಳು, ಈಜು ಕೊಳಗಳು, ಪ್ರವಾಸಿ ಸ್ಥಳಗಳು ಸೇರಿದಂತೆ ಜನ ಸೇರುವ ಮತ್ತಿತರ ಪ್ರಮುಖ ಸ್ಥಳಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆರೋಗ್ಯ ಸಚಿವ ಬನ್ನಾ ಗುಪ್ತಾ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಅಂತ್ಯಕ್ರಿಯೆ ಮತ್ತು ಮದುವೆ ಸಮಾರಂಭದಲ್ಲಿ 100 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶವಿದೆ ಎಂದು ಹೇಳಿದರು.

ರಾತ್ರಿ 8 ಗಂಟೆಯ ನಂತರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ. ಕಿರಾಣಿ ಅಂಗಡಿಗಳು, ಔಷಧಿ ಅಂಗಡಿಗಳು ತೆರೆದಿರುತ್ತವೆ, ರೆಸ್ಟೋರೆಂಟ್‌ಗಳು ಶೇ. 50ರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ಈ ನಿರ್ಧಾರ ಜನವರಿ 15ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಒಡಿಶಾದಲ್ಲಿ ಒಮಿಕ್ರಾನ್‌ ಸ್ಫೋಟ; ಒಂದೇ ದಿನ 23 ಮಂದಿಗೆ ಸೋಂಕು!

For All Latest Updates

TAGGED:

ABOUT THE AUTHOR

...view details