ಬಾರ್ಮರ್(ರಾಜಸ್ಥಾನ):ಭಾರತೀಯ ವಾಯಸೇನೆ(IAF)ಯ ಮಿಗ್-21 ಬೈಸನ್ ಫೈಟರ್ ಏರ್ಕ್ರಾಫ್ಟ್ ಪತನಗೊಂಡಿದ್ದು, ಪೈಲಟ್ ಸುರಕ್ಷಿತವಾಗಿದ್ದಾನೆಂದು ತಿಳಿದು ಬಂದಿದೆ. ತರಬೇತಿ ವೇಳೆ ರಾಜಸ್ಥಾನದ ಬಾರ್ಮರ್ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪ್ರಾಣಾಪಾಯದಿಂದ ಪಾರಾದ ಪೈಲಟ್ ರಾಜಸ್ಥಾನದ ಬಾರ್ಮರ್ನಿಂದ 35 ಕಿಲೋ ಮೀಟರ್ ದೂರದಲ್ಲಿರುವ ಮತಸರ್ ಪ್ರದೇಶದಲ್ಲಿ ಯುದ್ಧ ವಿಮಾನದ ತರಬೇತಿ ನಡೆಯುತ್ತಿತ್ತು. ಈ ವೇಳೆ, ದುರ್ಘಟನೆ ಸಂಭವಿಸಿದೆ. ತಕ್ಷಣವೇ ಪೈಲಟ್ನನ್ನ ಸುರಕ್ಷಿತವಾಗಿ ಹೊರ ತರಲಾಗಿದ್ದು, ಇದರ ಬೆನ್ನಲ್ಲೇ ಯುದ್ಧ ವಿಮಾನ ಹೊತ್ತಿ ಉರಿದಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಭಾರತೀಯ ವಾಯುಸೇನೆ, ಇಂದು ಸಂಜೆ 5:30ರ ವೇಳೆ ಈ ಘಟನೆ ನಡೆದಿದ್ದು, ಮಿಗ್-21 ಬೈಸನ್ ಏರ್ಕ್ರಾಫ್ಟ್ ತರಬೇತಿಯಲ್ಲಿ ಪಾಲ್ಗೊಂಡಿತ್ತು. ತಾಂತ್ರಿಕ ವೈಫಲ್ಯದಿಂದ ಈ ಘಟನೆ ನಡೆದಿದ್ದು, ಪೈಲಟ್ ಸುರಕ್ಷಿತವಾಗಿದ್ದಾರೆಂದು ತಿಳಿಸಿದೆ.
ಇದೇ ವರ್ಷ ಮೇ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಪಂಜಾಬ್ನ ಮೊಗ್ ಜಿಲ್ಲೆಯಲ್ಲಿ ಮಿಗ್-21 ಏರ್ಕ್ರಾಫ್ಟ್ ಪತನಗೊಂಡಿತ್ತು. ಈ ವೇಳೆ, ಪೈಲಟ್ ಅಭಿನವ್ ಚೌಧರಿ ಸಾವನ್ನಪ್ಪಿದ್ದರು.
ಇದನ್ನೂ ಓದಿರಿ: ಕೇಂದ್ರ ಸಚಿವ ರಾಣೆ ಮನೆಗೆ ನುಗ್ಗಿ ಕೊಲೆ ಮಾಡುವೆ: ಶಿವಸೇನೆ ಶಾಸಕನಿಂದ ಜೀವ ಬೆದರಿಕೆ