ನವದೆಹಲಿ:ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮನ್ ಕಿ ಬಾತ್ ನ 100 ನೇ ಸಂಚಿಕೆಯ ಪ್ರಸಾರಕ್ಕೂ ಮುನ್ನ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ್ದಾರೆ. ಈ ಮೂಲಕ ಅವರು ಪ್ರಧಾನಿ ಮೋದಿ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ಮನ್ ಕಿ ಬಾತ್ 100ನೇ ಸಂಚಿಕೆಯ ಸಂಭ್ರಮದಲ್ಲಿದೆ. ಇದೀಗ ಈ ಸಂಭ್ರಮ ದುಪ್ಪಟ್ಟಾಗಿದೆ. ಮೈಕ್ರೋಸಾಫ್ಟ್ ಸಂಹ ಸಂಸ್ಥಾಪಕ, ವಿಶ್ವದ 4ನೇ ಶ್ರೀಮಂತ ಬಿಲ್ ಗೇಟ್ಸ್ ಅವರು ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೊಂಡಾಡಿದ್ದಾರೆ. ದೇಶದಲ್ಲಿ ನಾಗರಿಕರ ಪ್ರಜ್ಞೆಯ ಜೊತೆಗೆ ಸುಸ್ಥಿರ ಅಭಿವೃದ್ಧಿ ವೇಗದಲ್ಲಿ ಮನ್ ಕಿ ಬಾತ್ ಮಹತ್ತರ ಕೊಡುಗೆ ನೀಡಿದೆ ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ಧಾರೆ.
ಪ್ರಧಾನಿ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆ ನಾಳೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಬಗ್ಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ಕುರಿತು ಅವರು ಮಹತ್ವದ ಮಾತುಗಳನ್ನಾಡಿದ್ದಾರೆ.
ಮನ್ ಕಿ ಬಾತ್ ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣದ ಜೊತೆಗೆ ಸುಸ್ಥಿರ ಅಭಿವೃದ್ಧಿ, ಸಮುದಾಯ ನೇತೃತ್ವದ ಕಾರ್ಯಕ್ರಮಗಳ ವೇಗ ಹೆಚ್ಚಿಸಿದೆ. 100ನೇ ಸಂಚಿಕೆ ಪ್ರಸಾರವಾಗಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ದೇಶ ವಿದೇಶದಲ್ಲಿ ಜನಪ್ರಿಯವಾಗಿರುವ ಮನ್ ಕಿ ಬಾತ್ ನಾಳೆ 100ನೇ ಸಂಚಿಕೆ ಪ್ರಸಾರವಾಗುತ್ತಿದೆ. ಮನ್ ಕಿ ಬಾತ್ನ ಈ ವಿಶೇಷ ಸಂಚಿಕೆ ಈಗಾಗಲೇ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಮನ್ ಕಿ ಬಾತ್ 100ನೇ ವಿಶೇಷ ಕಾರ್ಯಕ್ರಮದಲ್ಲಿ ದೇಶದ ಹಲವು ಗಣ್ಯರು ಪಾಲ್ಗೊಂಡು ಮಾತನಾಡಿರುವುದು ಗೊತ್ತಿರುವ ಸಂಗತಿ.