ಕರ್ನಾಟಕ

karnataka

ETV Bharat / bharat

47 ಹುಲಿಗಳಿಗೆ ಆಶ್ರಯ ತಾಣವಾದ ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶ - 2021 wildlife census

ಮಹಾರಾಷ್ಟ್ರದ ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶವು ದೇಶದಲ್ಲೇ ಹುಲಿಗಳಿಗೆ ಸುರಕ್ಷಿತ ಪ್ರದೇಶವಾಗಿದ್ದು, ಇಲ್ಲಿ ಒಟ್ಟು 47 ಹುಲಿಗಳು ಆಶ್ರಯ ಪಡೆದಿವೆ.

tiger
ಹುಲಿ

By

Published : Dec 16, 2022, 11:41 AM IST

ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶ

ಮಹಾರಾಷ್ಟ್ರ: ಅಮರಾವತಿ ಜಿಲ್ಲೆಯಲ್ಲಿರುವ ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶವು ಇಡೀ ದೇಶದಲ್ಲೇ ಹುಲಿಗಳಿಗೆ ಸುರಕ್ಷಿತ ಪ್ರದೇಶವಾಗಿದ್ದು, 2021ರ ವನ್ಯಜೀವಿ ಗಣತಿಯ ಪ್ರಕಾರ ಇಲ್ಲಿ ಒಟ್ಟು 47 ಹುಲಿಗಳು ನೆಲೆಸಿವೆ ಎಂದು ತಿಳಿದುಬಂದಿದೆ.

ಅಮರಾವತಿ - ತಡೋಬಾ ಹುಲಿ ಸಂರಕ್ಷಿತ ಪ್ರದೇಶವು ಹುಲಿ ಸಫಾರಿಗೆ ದೇಶಾದ್ಯಂತ ಹೆಸರುವಾಸಿ. ಮೆಲ್ಘಾಟ್ ಹುಲಿ ಸಂರಕ್ಷಿತ ಯೋಜನೆಯು 1972 ರಲ್ಲಿ ಬಂಗಾಳದ ಹುಲಿಗಳನ್ನು ರಕ್ಷಿಸಲು ಭಾರತದಲ್ಲಿ ಪ್ರಾರಂಭಿಸಲಾದ ವನ್ಯಜೀವಿ ಸಂರಕ್ಷಣಾ ಯೋಜನೆಯಾಗಿದೆ. ಮಾನವ ಶಕ್ತಿಯ ಸದ್ಬಳಕೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಿತ ಗಸ್ತು ತಿರುಗುವಿಕೆ, ವಿಶೇಷ ಹುಲಿ ಸಂರಕ್ಷಣಾ ಪಡೆ ಸಿಬ್ಬಂದಿಯ ಸಹಕಾರ ಮತ್ತು ವನ್ಯಜೀವಿ ಅಪರಾಧ ಕೋಶದ ಕ್ರಿಯಾತ್ಮಕ ತನಿಖೆಯಿಂದಾಗಿ ನಾವು ಹುಲಿಗಳನ್ನು ಸಂರಕ್ಷಿಸುತ್ತಿದ್ದೇವೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಎಂ. ಎನ್. ಖೈರ್ನಾರ್ ಹೇಳಿದ್ದಾರೆ.

ವಿಶೇಷ ಹುಲಿ ಸಂರಕ್ಷಣಾ ಪಡೆಯ ಕಾರ್ಯಕ್ಷಮತೆ: ವಿಶೇಷ ಹುಲಿ ಸಂರಕ್ಷಣಾ ಪಡೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ರೇಂಜ್ ಅಧಿಕಾರಿಗಳು, ಅರಣ್ಯ ರಕ್ಷಕರು ಮತ್ತು ಅರಣ್ಯ ನಿರೀಕ್ಷಕರ ಒಟ್ಟು 112 ಹುದ್ದೆಗಳಿವೆ. ಇಲ್ಲಿ ವಿಶೇಷ ಹುಲಿ ರಕ್ಷಣಾ ಪಡೆಯ ಒಟ್ಟು ಮೂರು ತುಕಡಿಗಳನ್ನು ರಚಿಸಲಾಗಿದೆ. ಪ್ರತಿ ವಿಭಾಗದಲ್ಲಿ 27 ಅರಣ್ಯ ರಕ್ಷಕರು ಮತ್ತು 9 ಅರಣ್ಯ ನಿರೀಕ್ಷಕರು ಇದ್ದಾರೆ. ಗುಗಮಲ್ ವನ್ಯಜೀವಿ ವಿಭಾಗ, ಪರತ್ವಾಡದಲ್ಲಿ ಚಿಕಲ್ದಾರ ಸಿಪಾನ ವನ್ಯಜೀವಿ ವಿಭಾಗ ಮತ್ತು ಅಕೋಟ್ ವನ್ಯಜೀವಿ ವಿಭಾಗದಲ್ಲಿ ಮೂರು ತುಕಡಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಮೈತ್ರಿ ಬಾಗ್ ಮೃಗಾಲಯದಲ್ಲಿ 2 ತಿಂಗಳ ಬಿಳಿ ಹುಲಿ 'ಸಿಂಗಮ್' ಸಂಭ್ರಮ- ವಿಡಿಯೋ

ಹುಲಿ ಸಂರಕ್ಷಣೆಗೆ ಒತ್ತು : ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶದ 6 ವನ್ಯಜೀವಿ ವಿಭಾಗಗಳಲ್ಲಿ ಒಟ್ಟು 460 ಅರಣ್ಯ ರಕ್ಷಕರ ಹುದ್ದೆಗಳು ಮಂಜೂರಾಗಿವೆ. ಕಳೆದ ಎರಡು ವರ್ಷಗಳಲ್ಲಿ 153 ಅರಣ್ಯರಕ್ಷಕರು ಅಮರಾವತಿ ಅರಣ್ಯ ಇಲಾಖೆಯಲ್ಲಿ ಅರಣ್ಯಾಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದು, ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿವೆ. ಆದ್ದರಿಂದ ವಿಶೇಷ ಹುಲಿ ಸಂರಕ್ಷಣಾ ಪಡೆಯ ಅರಣ್ಯ ರಕ್ಷಕರು ಮತ್ತು ಅರಣ್ಯ ನಿರೀಕ್ಷಕರಿಗೆ ನಿಯೋಜಿತ ಪ್ರದೇಶದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಒಟ್ಟು 102 ಅರಣ್ಯ ಸಿಬ್ಬಂದಿ ಮತ್ತು ಅರಣ್ಯ ನಿರೀಕ್ಷಕರಲ್ಲಿ 71 ಮಂದಿಗೆ ಸೂಕ್ಷ್ಮ ಪ್ರದೇಶಗಳ ಜವಾಬ್ದಾರಿ ನೀಡಲಾಗಿದೆ. ಇದರಿಂದ ಆ ಪ್ರದೇಶದಲ್ಲಿ ನಿಯಮಿತ ಗಸ್ತು ತಿರುಗುವ ಮೂಲಕ ಹುಲಿ ಸಂರಕ್ಷಣೆ ಉತ್ತೇಜಿಸಲಾಗುತ್ತಿದೆ ಎಂದು ಖೈರ್ನಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಬಂಡೀಪುರದಲ್ಲಿ ಪ್ರವಾಸಿಗರ ಮನಗೆದ್ದ ಮರಿ ಹುಲಿ.. ವಿಡಿಯೋ ವೈರಲ್

ABOUT THE AUTHOR

...view details