ಕರ್ನಾಟಕ

karnataka

ETV Bharat / bharat

ದೆಹಲಿ ಪಾಲಿಕೆ ಚುನಾವಣೆ ಕಾದಾಟ: ಗದ್ದುಗೆ ಹಿಡಿಯಲು 10 ಘೋಷಣೆ ಹೊರಡಿಸಿದ ಎಎಪಿ

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಗದ್ದುಗೆ ಹಿಡಿಯುವ ಹವಣಿಕೆಯಲ್ಲಿರುವ ಎಎಪಿ 10 ಪ್ರಮುಖ ಘೋಷಣೆಗಳನ್ನು ಹೊರಡಿಸಿದೆ.

ಎಂಸಿಡಿ ಚುನಾವಣೆ ಕದಾಟ: ಗದ್ದುಗೆ ಹಿಡಿಯಲು 10 ಘೋಷಣೆ ಮಾಡಿದ ಎಎಪಿ
MCD election fight AAP has made 10 announcements

By

Published : Nov 11, 2022, 1:29 PM IST

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಗೆದ್ದರೆ, ಪಾಲಿಕೆಯನ್ನು ಭ್ರಷ್ಟ ಮುಕ್ತಗೊಳಿಸುವುದು ಸೇರಿದಂತೆ ಮೂರು ಪ್ರದೇಶಗಳ ಸ್ವಚ್ಛಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ಘೋಷಿಸಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಗದ್ದುಗೆ ಹಿಡಿಯುವ ಹವಣಿಕೆಯಲ್ಲಿರುವ ಎಎಪಿ 10 ಪ್ರಮುಖ ಘೋಷಣೆಗಳನ್ನು ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ನಗರ ಸ್ವಚ್ಛಗೊಳಿಸುವುದು. ದೆಹಲಿಯ ಪಾರ್ಕಿಂಗ್​ ಸಮಸ್ಯೆಗೆ ಶಾಶ್ವತ ಪರಿಹಾರ, ರಸ್ತೆ ರಿಪೇರಿ ಮತ್ತು ಎಂಸಿಡಿಯ ಶಾಲೆ ಮತ್ತು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವ ಭರವಸೆ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಪಾಲಿಕೆಯ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವುದು, ಜೊತೆಗೆ ಇನ್ಸ್​ಪೆಕ್ಟರ್​ ರಾಜ್​ ಸರ್ಕಾರವನ್ನು ಪೂರ್ಣಗೊಳಿಸಲಾಗುವುದು, ಸೀಲ್​ ಆಗಿರುವ ಅಂಗಡಿಗಳನ್ನು ತೆರೆಯುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ, ಎಎಪಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ರೆ, ಬಿಜೆಪಿ ವಚನಭ್ರಷ್ಟವಾಗಿದೆ. ಐದು ವರ್ಷದ ಅವಧಿಯಲ್ಲಿ ಯಾವುದೇ ಕಾರ್ಯ ಮಾಡಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: ನಾನು ಭಯೋತ್ಪಾದಕನಲ್ಲ, ಭ್ರಷ್ಟನೂ ಅಲ್ಲ, ಜನರ ಪ್ರೀತಿಪಾತ್ರನು: ಸಿಎಂ ಕೇಜ್ರಿವಾಲ್

ABOUT THE AUTHOR

...view details