ಪಂಜಾಬ್: ಪತಿಯ ಕುಟುಂಬಸ್ಥರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬರ್ನಾಲಾ ಜಿಲ್ಲೆಯ ತಾಜೋಕೆ ಗ್ರಾಮದಲ್ಲಿ ನಡೆದಿದೆ. ಸಾವಿಗೂ ಮುನ್ನ ಗೃಹಿಣಿ ವಿಡಿಯೋ ಮಾಡಿ ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಮನ್‌ದೀಪ್ ಕೌರ್ ಮೃತ ಮಹಿಳೆ. ಈಕೆಯನ್ನು ಹಲವು ವರ್ಷಗಳ ಹಿಂದೆ ತಾಜೋಕೆ ಗ್ರಾಮದ ಬೂಟಾ ಸಿಂಗ್ ಅವರ ಪುತ್ರ ಜೇತ್ ಜೇಥಾನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ 5 ವರ್ಷದ ಮಗುವಿದೆ. ವಿವಾಹವಾದ ನಂತರ ಅತ್ತೆ ನನ್ನ ಪತಿಯನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು. ನನಗೂ ನಿರಂತರ ಕಿರುಕುಳ ನೀಡಿ ಥಳಿಸುತ್ತಿದ್ದರು. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮಹಿಳೆ ವಿಡಿಯೋದಲ್ಲಿ ಆಗ್ರಹಿಸಿದ್ದಾರೆ.