ಮೈಲಾಡುತುರೈ(ತಮಿಳುನಾಡು) :ನಮ್ಮ ಭಾರತ ದೇಶ ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿ. ಆದ್ರೆ, ಇತ್ತೀಚಿನ ದಿನಗಳಲ್ಲಿ ದುರಾದೃಷ್ಟ ಎನ್ನುವಂತೆ ಕೆಲವೆಡೆ ಜಾತಿ, ಧರ್ಮದ ವಿಚಾರಗಳಿಂದ ಗಲಾಟೆ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಮೂಲಕ ಜನರ ನಡುವೆ ವೈಮನಸ್ಸು ಏರ್ಪಡುತ್ತಿದೆ. ಆದ್ರೆ, ತಮಿಳುನಾಡಿನ ಜೋಡಿಯೊಂದು ಮೂರು ಧರ್ಮಗಳ ಸಂಪ್ರದಾಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸಂಪ್ರದಾಯದ ಪ್ರಕಾರ ಈ ಜೋಡಿ ಮದುವೆಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಮೈಲಾಡುತುರೈ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪುರುಷೋತ್ತಮನ್ ಅವರ ಪೋಷಕರು ಭುವನೇಶ್ವರಿ ಅವರೊಂದಿಗೆ ಮಗನ ಮದುವೆ ನಿಶ್ಚಯಿಸಿದ್ದರು. ಪುರುಷೋತ್ತಮನ್ ಅವರು ಎಲ್ಲಾ ಧರ್ಮದ ಜನರು ವಾಸಿಸುವ ಸ್ಥಳದಲ್ಲಿ ಬೆಳೆದಿದ್ದಾರೆ. ಹಾಗಾಗಿ, ಅವರು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಪದ್ಧತಿಯಂತೆ ಮದುವೆಯಾಗಲು ನಿರ್ಧರಿಸಿದ್ದರು. ಅವರು ವಧುವಿನ ಕುಟುಂಬಕ್ಕೆ ತಮ್ಮ ಆಸೆಯನ್ನು ತಿಳಿಸಿದರು. ಪುರುಷೋತ್ತಮನ್ ಅವರ ಆಸೆಯನ್ನು ಪೂರೈಸಲು ಎರಡೂ ಕುಟುಂಬಗಳು ಒಪ್ಪಿಕೊಂಡು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು.