ಪುಣೆ (ಮಹಾರಾಷ್ಟ್ರ) :ಮಹಿಳಾ ಪೊಲೀಸ್ ಪೇದೆ ಮೇಲೆ ಸಹೋದ್ಯೋಗಿಯೇ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಸ್ವರ್ಗೇಟ್ ಪೊಲೀಸ್ ಕಾಲೋನಿಯನ್ನು ಗನ್ನಿಂದ ಬೆದರಿಸಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳಾ ಪೊಲೀಸ್ ಪೇದೆಯು ಆರೋಪಿ ವಿರುದ್ಧ ಖಡಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ದೀಪಕ್ ಸೀತಾರಾಮ್ ಮೋಘೆ ಅವರನ್ನು ಪುಣೆಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಜೊತೆಗೆ ಸಂತ್ರಸ್ತ ಮಹಿಳಾ ಪೊಲೀಸ್ ಪೇದೆಯನ್ನೂ ಇಲ್ಲಿನ ಠಾಣೆಗೆ ನೇಮಿಸಲಾಗಿತ್ತು. ಈ ಇಬ್ಬರು ಸ್ವರ್ಗೇಟ್ ಪೊಲೀಸ್ ಕಾಲೋನಿಯಲ್ಲಿ ವಾಸವಿದ್ದರು. ಈ ವೇಳೆ ಆರೋಪಿ ಮಹಿಳಾ ಪೊಲೀಸ್ ಪೇದೆ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತ ಮಹಿಳಾ ಪೊಲೀಸ್ ದೂರಿನ ಪ್ರಕಾರ, ಆರೋಪಿ ದೀಪಕ್ ಸೀತಾರಾಮ್ ಮೋಘೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೀಪಕ್ ಮೋಘೆ ಕಳೆದ 2020ರಿಂದ ಆಗಸ್ಟ್ 1, 2023ರವರೆಗೆ ಹಲವು ಬಾರಿ ಪುಣೆಯ ಪೊಲೀಸ್ ಕಾಲೋನಿ ಮತ್ತು ಖಡಕ್ವಾಸ್ಲಾದ ಲಾಡ್ಜ್ವೊಂದರಲ್ಲಿ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಆರೋಪಿ ದೀಪಕ್ ಮಹಿಳೆ ಪೇದೆಯನ್ನು ಪರಿಚಯಿಸಿಕೊಂಡಿದ್ದನು. ಬಳಿಕ ಆರೋಪಿ ಮಹಿಳಾ ಪೇದೆ ಮನೆಗೆ ಊಟಕ್ಕೆ ಬರುತ್ತಿದ್ದನು. ಈ ನಡುವೆ ಆರೋಪಿ ಮಹಿಳಾ ಪೇದೆಗೆ ಮತ್ತು ಬರುವ ಔಷಧ ನೀಡಿದ್ದಾನೆ. ಇದರಿಂದಾಗಿ ಅವರು ಪ್ರಜ್ಞೆ ತಪ್ಪಿದ್ದು, ಬಳಿಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ತನ್ನ ಹೇಯ ಕೃತ್ಯವನ್ನು ಚಿತ್ರೀಕರಿಸಿದ್ದು, ಈ ಬಗ್ಗೆ ಬಾಯಿ ಬಿಟ್ಟರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆ ಬಳಿಕವೂ ಆರೋಪಿ ನಿರಂತರ ಮಹಿಳಾ ಪೊಲೀಸ್ ಪೇದೆಗೆ ಗನ್ನಿಂದ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿರುವುದಾಗಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ದೀಪಕ್ ಮೋಘೆ ಸಂತ್ರಸ್ತೆಯ ಪತಿಗೂ ಕೊಲೆ ಬೆದರಿಕೆ ಹಾಕಿದ್ದಾನೆ.
ಚಿನ್ನಾಭರಣ, ಲ್ಯಾಪ್ಟಾಪ್, ಮೊಬೈಲ್ನೊಂದಿಗೆ ಪರಾರಿ: ಆರೋಪಿ ದೀಪಕ್ ಮೋಘೆ ಮಹಿಳಾ ಪೇದೆಯ ಮನೆಯಲ್ಲಿದ್ದ ಚಿನ್ನಾಭರಣ, ಲ್ಯಾಪ್ಟಾಪ್, ಮೊಬೈಲ್ ಫೋನ್ ಬಲವಂತವಾಗಿ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮಹಿಳಾ ಪೇದೆ ಒತ್ತಾಯಿಸಿದ್ದಾರೆ. ಕಳೆದ ದಿನ ಪುಣೆಯಲ್ಲಿ ಮಹಿಳಾ ಪೊಲೀಸ್ ಪೇದೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ದೌರ್ಜನ್ಯ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಪೊಲೀಸ್ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲು