ಕರ್ನಾಟಕ

karnataka

By

Published : Apr 10, 2022, 9:25 PM IST

ETV Bharat / bharat

ಯುಪಿಎಸ್​ಸಿಗೆ 31ನೇ ಮುಖ್ಯಸ್ಥರಾಗಿ ಮನೋಜ್​ ಸಿನ್ಹಾ ಆಯ್ಕೆ

ಯುಪಿಎಸ್​ಸಿಯ 31ನೇ ಮುಖ್ಯಸ್ಥರಾಗಿ ಆಯ್ಕೆಯಾದ ಡಾ.ಮನೋಜ್​ ಸಿನ್ಹಾ ಅವರು 12 ನೇ ತರಗತಿಯಲ್ಲಿ ವಿಜ್ಞಾನ ಪರೀಕ್ಷೆಯಲ್ಲಿ ನಪಾಸಾಗಿ, ಕಲಾ ವಿಭಾಗಕ್ಕೆ ಸೇರಿದ್ದರು. ಬಳಿಕ ಅಂತರರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಪರಿಣತಿ ಸಾಧಿಸಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

Manoj Sinha
ಮಜೋಜ್​ ಸಿನ್ಹಾ

ಅಹಮದಾಬಾದ್:ಡಾ.ಮನೋಜ್​ ಸಿನ್ಹಾ ಅವರು ಕೇಂದ್ರ ಲೋಕಸೇವಾ ಆಯೋಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಪ್ರದೀಪ್​ಕುಮಾರ್ ಜೋಶಿ ಅವರಿಂದ ತೆರವಾಗುತ್ತಿರುವ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ. 2 ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಸೇವೆ ಸಲ್ಲಿಸಿದ ಮನೋಜ್​ ಸಿನ್ಹಾ ಯುಪಿಎಸ್​ಸಿಗೆ ನೇಮಕವಾದ ಕಿರಿಯ ಮುಖ್ಯಸ್ಥರಾಗಿದ್ದಾರೆ. ಸಿನ್ಹಾ ಅವರ ಜೀವನ ಹಾದಿ ಸುಲಭವಾಗಿರದೇ ಮುಳ್ಳಿನ ಹಾದಿಯಾಗಿತ್ತು. ಅವರು ಸಾಗಿ ಬಂದ ಬದುಕೇ ರೋಚಕ ಮತ್ತು ಸ್ಫೂರ್ತಿದಾಯಕವಾಗಿದೆ.

17 ಫೆಬ್ರವರಿ 1965 ರಂದು ಮುಂಬೈನಲ್ಲಿ ಜನಿಸಿದ ಡಾ.ಮನೋಜ್​ ಸಿನ್ಹಾ ಅವರ ತಂದೆ ಬೀದಿಬದಿಯಲ್ಲಿ ಹಳೆ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿ. ಸಿನ್ಹಾ ಅವರು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತಂದೆಯನ್ನು ಕಳೆದುಕೊಂಡರು. ತಂದೆಯ ಅಕಾಲಿಕ ಮರಣದಿಂದ ಸಿನ್ಹಾ ಜೀವನೋಪಾಯಕ್ಕಾಗಿ ಮುಂಬೈನ ಬೀದಿಗಳಲ್ಲಿ ಅಗರಬತ್ತಿ ಮಾರಾಟ ಮಾಡಲು ಆರಂಭಿಸಿದರು.

ವಿಜ್ಞಾನದಲ್ಲಿ ಫೇಲ್, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ:ಬಳಿಕ 1978 ರಲ್ಲಿ ಗುಜರಾತ್​ನಿಂದ ಮುಂಬೈಗೆ ಕುಟುಂಬ ವರ್ಗಗೊಂಡಿತು. 12ನೇ ತರಗತಿಯಲ್ಲಿ ವಿಜ್ಞಾನ ಪರೀಕ್ಷೆಯಲ್ಲಿ ನಪಾಸಾದ ಸಿನ್ಹಾ ಅವರು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ(ಐಆರ್​) ಪರಿಣತಿ ಹೊಂದಿರುವ ಅವರು ಸರ್ದಾರ್​ ಪಟೇಲ್​ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಆ ಬಳಿಕ ಡಾ. ಮನೋಜ್ ಸಿನ್ಹಾ ಅವರು, MS ವಿಶ್ವವಿದ್ಯಾಲಯ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದ (BAOU) ಕುಲಪತಿಗಳಾಗಿ ಕೆಲಸ ಮಾಡಿದ್ದಾರೆ. ಇದಲ್ಲದೇ ತಮ್ಮ 40ನೇ ವಯಸ್ಸಿನಲ್ಲಿ ವಡೋದರದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕವಾದ ನಂತರ ದೇಶದ ಅತ್ಯಂತ ಕಿರಿಯ ಕುಲಪತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಯುಪಿಎಸ್​ಸಿಗೆ 31ನೇ ಮುಖ್ಯಸ್ಥ:ಲೇಖಕರೂ ಆಗಿರುವ ಡಾ.ಮನೋಜ್​ ಸಿನ್ಹಾ ಅವರು, ‘ಅಂಡರ್‌ಸ್ಟಾಂಡಿಂಗ್ ದಿ ಗ್ಲೋಬಲ್ ಪೊಲಿಟಿಕಲ್ ಅರ್ಥ್​ಕ್ವೇಕ್​’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಸಂದಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೆದರ್​ಲ್ಯಾಂಡ್​ ಭೇಟಿ ಪೂರ್ಣಗೊಂಡ ನಂತರ ಮನೋಜ್ ಸಿನ್ಹಾರ ನೇಮಕ ಆದೇಶ ಹೊರಬೀಳಲಿದೆ. ಅವರ ಅಧಿಕಾರವಧಿಯು ಜೂನ್ 27, 2023 ರಂದು ಕೊನೆಗೊಳ್ಳುತ್ತದೆ.

ಇದನ್ನೂ ಓದಿ:ಕಕ್ಷೆಯಲ್ಲಿ ಭಾರತ ಹೊಂದಿರುವ ಸಕ್ರಿಯ-ನಿಷ್ಕ್ರಿಯ ಉಪಗ್ರಹಗಳು ಎಷ್ಟು ಗೊತ್ತಾ?

ABOUT THE AUTHOR

...view details