'ಜನರು ನಮ್ಮನ್ನು ತಲುಪಲು ಸಾಧ್ಯವಾಗದೆ ಇದ್ದಾಗ, ನಾವೇ ಅವರ ಬಳಿ ತೆರಳಬೇಕು' ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಈ ಸುವರ್ಣ ಪದಗಳು ಹೇಳಿ ನಿಖರವಾಗಿ ಒಂದು ತಿಂಗಳಾಯಿತು. ಇಂದು 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಜನರಿಗೆ ಉಚಿತ ಕಾನೂನು ನೆರವು ನೀಡುವಂತೆ ಸಲಹೆ ನೀಡಿದ್ದು, ಅವರಲ್ಲಿನ ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ.
ಐದು ದಶಕಗಳ ಹಿಂದೆ ಆಂಧ್ರಪ್ರದೇಶದ ಸಿಜೆಐ ಹುದ್ದೆ ಅಲಂಕರಿಸಿದ ನ್ಯಾಯಮೂರ್ತಿ ಕೋಕಾ ಸುಬ್ಬಾ ರಾವ್ ಅವರ ನಂತರ ಶನಿವಾರ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ, ದೇಶದ ಅತ್ಯುನ್ನತ ಕಾನೂನು ಪೀಠ ಏರಿದ ಎರಡನೇ ವ್ಯಕ್ತಿಯಾಗಿದ್ದಾರೆ ಎನ್ ವಿ ರಮಣ. ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ರಮಣ ಅವರು 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.
ಎನ್.ವಿ.ರಮಣ ಅವರು ಕೃಷಿ ಕುಟುಂಬದಲ್ಲಿ 1957ರ ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನವರಂ ಗ್ರಾಮದಲ್ಲಿ ಜನಿಸಿದರು. ಪೂರ್ಣ ಪ್ರಮಾಣದ ವಕೀಲರಾಗುವ ಮೊದಲು ರಮಣ ಪ್ರಮುಖ ತೆಲುಗಿನ 'ಈನಾಡು' ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದರು.
1983ರಲ್ಲಿ ವಕೀಲರಾಗಿ ವೃತ್ತಿಗೆ ಸೇರಿಕೊಂಡರು. ಆಂಧ್ರಪ್ರದೇಶದ ಆಡಳಿತ ನ್ಯಾಯಮಂಡಳಿಗಳು ಮತ್ತು ಭಾರತದ ಸುಪ್ರೀಂಕೋರ್ಟ್‌ನಲ್ಲಿ ನಾಗರಿಕ, ಅಪರಾಧ, ಸಾಂವಿಧಾನಿಕ, ಕಾರ್ಮಿಕ, ಸೇವೆ ಮತ್ತು ಚುನಾವಣೆಗೆ ಸಂಬಂಧಿಸಿದ ಹಲವು ವಿಷಯಗಳ ಅಭ್ಯಾಸ ಮಾಡಿದರು.
ನ್ಯಾಯಮೂರ್ತಿ ರಮಣ ಅವರನ್ನು 2000ರ ಜೂನ್ನಲ್ಲಿ ಆಂಧ್ರಪ್ರದೇಶದ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 2013ರ ಮಾರ್ಚ್ ಮತ್ತು ಮೇ ನಡುವೆ ಅಲ್ಪಾವಧಿಗೆ ಆಂಧ್ರಪ್ರದೇಶದ ಹೈಕೋರ್ಟ್‌ನ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು.
2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಅವರನ್ನು ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಕಣಿವೆಯಲ್ಲಿ ಅಂತರ್ಜಾಲ ಪುನಃಸ್ಥಾಪನೆ, ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮರು ರಚನೆ ಮತ್ತು ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್‌ನಲ್ಲಿ ಹಲವು ಉನ್ನತ ಪ್ರಕರಣಗಳನ್ನು ನಿರ್ವಹಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಹುಮತ ಸಾಬೀತುಪಡಿಸುವಂತೆ ಕೇಳಿಕೊಂಡ ನ್ಯಾಯಪೀಠದ ನೇತೃತ್ವ ವಹಿಸಿದ್ದವರ ಪೈಕಿ ರಮಣ ಕೂಡ ಒಬ್ಬರು.
2019ರಲ್ಲಿ ತಮ್ಮ ಸಂವಿಧಾನ ದಿನದ ಭಾಷಣದ ವೇಳೆ ನ್ಯಾಯಮೂರ್ತಿ ರಮಣ ಅವರು, 'ನಾವು ಹೊಸ ಸಾಧನಗಳನ್ನು ರೂಪಿಸಬೇಕು. ಹೊಸ ವಿಧಾನಗಳನ್ನು ರಚಿಸಬೇಕು. ಹೊಸ ತಂತ್ರಗಳನ್ನು ಆವಿಷ್ಕರಿಸಬೇಕು.
ಹೊಸ ನ್ಯಾಯಕಶಾಸ್ತ್ರವನ್ನು ವಿಕಸನಗೊಳಿಸಿ ಕೇವಲ ನಿರ್ಧಾರಗಳನ್ನು ನೀಡಲು ಮತ್ತು ಸಾಂವಿಧಾನಿಕ ಉದ್ದೇಶಗಳನ್ನು ಸಾಧಿಸಲು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು' ಎಂದಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಮಾತುಗಳನ್ನು ಮುಂದಿನ 16 ತಿಂಗಳ ಅಧಿಕಾರಾವಧಿಯಲ್ಲಿ ರಮಣ ಕಾರ್ಯರೂಪಕ್ಕೆ ತರುತ್ತಾರೆ ಎಂಬ ಬಲವಾದ ನಂಬಿಕೆ ಗರಿಗೆದರಿದೆ.
ಸುಮಾರು ಐದು ವರ್ಷಗಳ ಹಿಂದೆ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ನ್ಯಾಯಾಂಗವು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಬಹಿರಂಗವಾಗಿ ವಿಷಾದಿಸಿದರು. ಸುಧಾರಿಸುವ ಬದಲು, ಸಮಯ ಕಳೆದಂತೆ ಪರಿಸ್ಥಿತಿ ಹದಗೆಡುತ್ತಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಡ್ಬೆ ಅವರ ಅಧಿಕಾರಾವಧಿಯಲ್ಲಿ ಅಪೆಕ್ಸ್ ನ್ಯಾಯಾಲಯದಲ್ಲಿ ಐದು ಖಾಲಿ ಹುದ್ದೆಗಳು ಭರ್ತಿ ಆಗಿಲ್ಲ.