ಛತರ್ಪುರ್(ಮಧ್ಯಪ್ರದೇಶ):ಛತರ್ಪುರ್ ಜಿಲ್ಲಾ ಆಸ್ಪತ್ರೆ ಹೊರಗೆ ಅಹಾಯಕ ತಾಯಿಯೊಬ್ಬಳ ಮಗನ ಮೃತದೇಹ ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿರುವ ದೃಶ್ಯ ವೈರಲ್ ಆಗಿದೆ. ಇದನ್ನ ನೋಡಿದ ಯಾವುದೇ ವ್ಯಕ್ತಿಯ ಕಣ್ಣಂಚಲ್ಲಿ ನೀರು ಬರದೇ ಇರದು.
ವಾಸ್ತವವಾಗಿ, 100 ರೂಪಾಯಿ ವೇತನಕ್ಕಾಗಿ ವ್ಯಕ್ತಿ ವಿದ್ಯುತ್ ಕಂಬ ಹತ್ತುವ ಕೆಲಸಕ್ಕೆ ಮುಂದಾಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಹಳ್ಳಿಯಲ್ಲಿ ವಾಸವಾಗಿದ್ದ ಖಾಸಗಿ ಗುತ್ತಿಗೆದಾರನೊಬ್ಬ ತನ್ನೊಂದಿಗೆ ಕೆಲಸ ಮಾಡಲು ಬಲವಂತವಾಗಿ ಕರೆದುಕೊಂಡು ಹೋಗಿದ್ದು, 100 ರೂ. ಕೂಲಿ ನೀಡುವುದಾಗಿ ಹೇಳಿದ್ದಾನೆ.
ವಿದ್ಯುತ್ ಕಂಬ ಹತ್ತಿ ಕೆಲಸ ಮಾಡ್ತಿದ್ದ ವೇಳೆ ಹಠಾತ್ ಶಾಕ್ ಹೊಡೆದು ಅಖಿಲೇಶ್ ಸಾವನ್ನಪ್ಪಿದ್ದಾನೆ. ತಕ್ಷಣವೇ ಆತನನ್ನ ಮೃತನ ತಾಯಿ ಸೀತಾ ಹಾಗೂ ಕುಟುಂಬದ ಸದಸ್ಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆತ ಸಾವನ್ನಪ್ಪಿದ್ದಾನೆಂದು ಘೋಷಣೆ ಮಾಡಿದ್ದಾರೆ.