ಕರ್ನಾಟಕ

karnataka

ETV Bharat / bharat

ಮೈದಾನದಲ್ಲಿ ಕ್ರಿಕೆಟ್​ ಆಡುವಾಗ ತಲೆಗೆ ಚೆಂಡು ಬಡಿದು ವ್ಯಕ್ತಿ ಸಾವು

ಮೈದಾನದಲ್ಲಿ ಕ್ರಿಕೆಟ್ ಆಡುವಾಗ ತಲೆಗೆ ಚೆಂಡು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

Etv man-death-after-ball-hit-while-two-matches-on-one-ground-in-mumbai
ಮೈದಾನದಲ್ಲಿ ಕ್ರಿಕೆಟ್​ ಆಡುವಾಗ ತಲೆಗೆ ಚೆಂಡು ಬಡಿದು ವ್ಯಕ್ತಿ ಸಾವು

By ETV Bharat Karnataka Team

Published : Jan 10, 2024, 4:11 PM IST

ಮುಂಬೈ (ಮಹಾರಾಷ್ಟ್ರ) :ಮೈದಾನದಲ್ಲಿ ಕ್ರಿಕೆಟ್​ ಆಡುವಾಗ ತಲೆಗೆ ಚೆಂಡು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಚೆಂಡು ತಲೆಗೆ ಬಡಿದು ಉದ್ಯಮಿ ಜಯೇಶ್​ ಚುನ್ನಿಲಾಲ್​ ಸಾವ್ಲಾ ಮೃತಪಟ್ಟಿದ್ದಾರೆ. ಜಯೇಶ್ ಉದ್ಯಮಿಯಾಗಿದ್ದು, ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

ಕಳೆದ ಸೋಮವಾರ ಮುಂಬೈನ ಮಾತುಂಗಾದಲ್ಲಿರುವ ದಾದರ್ಕರ್​ ಮೈದಾನದಲ್ಲಿ ಕುಚ್ಚಿ ವಿಜಾ ಓಸ್ವಾಲ್​ ವಿಕಾಸ್​ ಲೆಜೆಂಡ್ಸ್​ ಕಪ್​ ಪಂದ್ಯಾಟ ನಡೆಯುತ್ತಿತ್ತು. ಹಲವು ತಂಡಗಳು ಈ ಪಂದ್ಯದಲ್ಲಿ ಭಾಗಿಯಾಗಿದ್ದವು. ಈ ಸಂಬಂಧ ಒಂದೇ ಮೈದಾನದಲ್ಲಿ ಎರಡು ಪಿಚ್​ಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು.

ಒಂದು ಕಡೆ ಆಟ ಆಡುತ್ತಿದ್ದ ಜಯೇಶ್​ ಅವರ ತಲೆ ಮೇಲೆ ಇನ್ನೊಂದು ಕಡೆಯಲ್ಲಿ ಆಡುತ್ತಿದ್ದ ಚೆಂಡು ಬಂದು ಬಡಿದಿದೆ. ಜಯೇಶ್ ವಿರುದ್ಧ ದಿಕ್ಕಿನಲ್ಲಿ ನಿಂತು ಫೀಲ್ಡಿಂಗ್​ ಮಾಡುತ್ತಿದ್ದರಿಂದ ಈ ಚೆಂಡು ಬಂದಿರುವುದು ಅವರಿಗೆ ಕಂಡಿಲ್ಲ. ತಲೆಗೆ ಚೆಂಡು ಬಡಿದ ತಕ್ಷಣ ಕುಸಿದುಬಿದ್ದ ಜಯೇಶ್ ಅವರನ್ನು ಸಹ ಕ್ರೀಡಾಳುಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಮುಂಬೈ ಪೊಲೀಸರು, ಇಲ್ಲಿನ ದಾದರ್ಕರ್​ ಮೈದಾನದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಕ್ರಿಕೆಟ್​ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭ ಮೈದಾನದಲ್ಲಿ ಆಟ ಆಡುತ್ತಿದ್ದ ಜಯೇಶ್ ಚುನ್ನಿಲಾಲ್​ ಸಾವ್ಲಾ (52)​ ಎಂಬವರ ತಲೆಗೆ ಚೆಂಡು ಬಡಿದಿದೆ. ಇದರಿಂದ ಜಯೇಶ್​ ಸ್ಥಳದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ಜಯೇಶ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜಯೇಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಮೈದಾನದಲ್ಲಿ ಕುಚ್ಚಿ ವಿಜಾ ಓಸ್ವಾಲ್​ ವಿಕಾಸ್​ ಲೆಜೆಂಡ್ಸ್​ ಕಪ್​ ಪಂದ್ಯಾವಳಿ ನಡೆಯುತ್ತಿತ್ತು. ಜಾಗದ ಕೊರತೆ ಮತ್ತು ಸಮಯದ ಅಭಾವದ ಕಾರಣದಿಂದ ಒಂದೇ ಮೈದಾನದಲ್ಲಿ ಎರಡೆರಡು ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಒಂದು ಕಡೆ ಆಡುತ್ತಿದ್ದ ಚೆಂಡು ಬಂದು ಇನ್ನೊಂದು ಪಂದ್ಯ ಆಡುತ್ತಿದ್ದ ಅವರ ಜಯೇಶ್​ ತಲೆಗೆ ಬಂದು ಬಡಿದಿದೆ. ಇದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಆಸ್ಪತ್ರೆ ವೈದ್ಯರ ಮಾಹಿತಿ ಪ್ರಕಾರ, ಸೋಮವಾರ ಸಂಜೆ 5 ಗಂಟೆಗೆ ವ್ಯಕ್ತಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಎಲ್ಲಾ ಪ್ರಕ್ರಿಯೆ ಮುಗಿದ ಬಳಿ ದೇಹವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ.

ಇದನ್ನೂ ಓದಿ :ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತ; 22 ವರ್ಷದ ಯುವಕ ಸಾವು

ABOUT THE AUTHOR

...view details