ಕರ್ನಾಟಕ

karnataka

ETV Bharat / bharat

ಮನೆಯ ವಿದ್ಯುತ್ ಸರಬರಾಜು ಕಡಿತ: ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ!

ಓಲ್ಡ್ ಮಂಗಲ್ವಾರಿ ನಿವಾಸಿ ರಾಜೇಶ್ ಸುದಮ್ ಬ್ಯಾಂಡ್ (42) ಕಳೆದ ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. 65,176 ರೂ. ನಷ್ಟು ಹಣ ಬಾಕಿ ಉಳಿಸಿಕೊಂಡಿದ್ದ. ಆತನಿಗೆ ಹಲವು ನೋಟಿಸ್ ಕಳುಹಿಸಲಾಗಿತ್ತು. ಯಾವುದಕ್ಕೂ ಜವಾಬು ನೀಡಲಿಲ್ಲ. ಎಂಎಸ್ಇಡಿಸಿಎಲ್ ಬುಧವಾರ ಮಧ್ಯಾಹ್ನ ಆತನ ಮನೆಯ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳಿಸಿತ್ತು

ಬೆಂಕಿ
ಬೆಂಕಿ

By

Published : Mar 25, 2021, 9:43 AM IST

ನಾಗ್ಪುರ:ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಎಂಎಸ್‌ಇಡಿಸಿಎಲ್) ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಹಚ್ಚಿಕೊಳ್ಳುವ ಮುನ್ನವೇ ಅಲ್ಲಿದ್ದ ಸಿಬ್ಬಂದಿ ಆತನ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓಲ್ಡ್ ಮಂಗಲ್ವಾರಿ ನಿವಾಸಿ ರಾಜೇಶ್ ಸುದಮ್ ಬ್ಯಾಂಡ್ (42) ಕಳೆದ ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. 65,176 ರೂ. ರಷ್ಟು ​ ಹಣ ಬಾಕಿ ಉಳಿಸಿಕೊಂಡಿದ್ದ. ಆತನಿಗೆ ಹಲವು ನೋಟಿಸ್ ಕಳುಹಿಸಲಾಗಿತ್ತು. ಯಾವುದಕ್ಕೂ ಜವಾಬು ನೀಡಲಿಲ್ಲ. ಎಂಎಸ್ಇಡಿಸಿಎಲ್ ಬುಧವಾರ ಮಧ್ಯಾಹ್ನ ಆತನ ಮನೆಯ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳಿಸಿತು.

ಇದನ್ನೂ ಓದಿ: ಮುಖೇಶ್ ಅಂಬಾನಿ ಮನೆ ಮುಂದೆ ಮತ್ತೊಂದು ವಾಹನ ಪತ್ತೆ..!

ಅಧಿಕಾರಿಗಳು ಸಭೆಯಲ್ಲಿ ನಡೆಸುತ್ತಿದ್ದಾಗ ಸಂಜೆ ವೇಳೆ ವಾರ್ಧಮನ್ ನಗರದ ಎಂಎಸ್‌ಇಡಿಸಿಎಲ್ ಕಚೇರಿಗೆ ರಾಜೇಶ್ ಆಗಮಿಸಿದ. ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದ. ಅವನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಬೆಂಕಿಕಡ್ಡಿ ತೆಗೆದನು. ಎಂಎಸ್‌ಇಡಿಸಿಎಲ್ ಅಧಿಕಾರಿಗಳು ಕೂಡಲೇ ಬೆಂಕಿಕಡ್ಡಿ ಕಿತ್ತೆಸೆದು ಪೊಲೀಸರಿಗೆ ಮಾಹಿತಿ ನೀಡಿದರು. ಆತ್ಮಹತ್ಯೆಗೆ ಯತ್ನಿಸಿದ್ದ ರಾಜೇಶ್​ನನ್ನು ಪೊಲೀಸರಯ ಠಾಣೆಗೆ ಕರೆದೊಯ್ದರು. ಐಪಿಸಿ ಸೆಕ್ಷನ್ 309 (ಆತ್ಮಹತ್ಯೆ ಯತ್ನ) ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

ABOUT THE AUTHOR

...view details