ಪುಲ್ವಾಮಾ (ಜಮ್ಮು- ಕಾಶ್ಮೀರ): ಇಲ್ಲಿನ ಟ್ರಾಲ್‌ನ ಸೈಮು ಪ್ರದೇಶದ ಬಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿದ್ದು, ಸಂಭವಿಸಬಹುದಾದ ಬಹುದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಐಇಡಿ ನಿಷ್ಕ್ರಿಯಗೊಳಿಸಲು ಬಾಂಬ್ ಡಿಸ್ಪೋಸಲ್ ದಳ ಸ್ಥಳಕ್ಕೆ ಧಾವಿಸಿದೆ ಎಂದರು. ಭಾನುವಾರದಂದು ಪುಲ್ವಾಮಾದ ಟ್ರಾಲ್‌ನ ಬಸ್ ನಿಲ್ದಾಣದಲ್ಲಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ನಾಕಾ ಪಾರ್ಟಿಯಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಸುಮಾರು 7 ನಾಗರಿಕರು ಗಾಯಗೊಂಡಿದ್ದರು.