ಮುಂಬೈ:ಮಹಾರಾಷ್ಟ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯುತ್ತಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ . ಇನ್ನು ಶಿಂದೆ ಮತ್ತು ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ರಾಷ್ಟ್ರೀಯವಾದಿ ಬೆಂಬಲಿತ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದೆ.
ಈ ವರ್ಷ ಮುಂಬೈ ಮತ್ತು ಉಪನಗರಗಳನ್ನು ಹೊರತುಪಡಿಸಿ 34 ಜಿಲ್ಲೆಗಳಲ್ಲಿ ಒಟ್ಟು 7,682 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಆದರೆ ಕೆಲವೆಡೆ ಅವಿರೋಧವಾಗಿ ಆಯ್ಕೆಯಾದ ಕಾರಣ 7,135 ಗ್ರಾ.ಪಂ.ಗಳಲ್ಲಿ ಭಾನುವಾರ ಮತದಾನ ನಡೆದಿದೆ.
ಮುನ್ನಡೆಯಲ್ಲಿರುವ ಪಕ್ಷಗಳು:
ಬಿಜೆಪಿ -188