ಮುಂಬೈ:ಎರಡನೇ ಕೊರೊನಾ ಅಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಮಹಾರಾಷ್ಟ್ರ ಸರ್ಕಾರ ಇಂದಿನಿಂದ 15 ದಿನಗಳ ಕಾಲ ಕಠಿಣ ಕರ್ಫ್ಯೂ ನಿಯಮಗಳನ್ನು ಜಾರಿಗೆ ತಂದಿದೆ. ರಾಜ್ಯಾದ್ಯಂತ ಸೆಕ್ಷನ್ 144 ಜಾರಿಯಲ್ಲಿದ್ದು, ಮಹಾರಾಷ್ಟ್ರ ಮರುಭೂಮಿಯಂತಾಗಿದೆ.
ಇದಕ್ಕೂ ಮುನ್ನ ರಾಜ್ಯದ ಹಲವು ನಗರಗಳಲ್ಲಿ ನೈಟ್ ಕರ್ಫ್ಯೂ, ಸೆಮಿ ಲಾಕ್ಡೌನ್ಗಳಂತಹ ನಿರ್ಬಂಧ ಹೇರಲಾಗಿತ್ತು. ಆದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಏ.14ರಿಂದ ಮೇ 1ರವರೆಗೆ 15 ದಿನಗಳ ಕಾಲ ರಾಜ್ಯವ್ಯಾಪಿ ಕರ್ಫ್ಯೂ ಘೋಷಿಸಿದರು.
ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆಯೇ ನಿನ್ನೆ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ವಲಸೆ ಕಾರ್ಮಿಕರು ಕರ್ಫ್ಯೂ ಆದೇಶ ಹೊರಬೀಳುತ್ತಿದ್ದಂತೆಯೇ ನಿನ್ನೆ ಸಂಜೆ ಮುಂಬೈಯಲ್ಲಿ ಇರುವ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲು ರೈಲ್ವೆ ನಿಲ್ದಾಣಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಬಂದು ಜಮಾಯಿಸಿದ್ದರು.
ಯಾವುದಕ್ಕೆ ನಿರ್ಬಂಧ?
ಮೆಡಿಕಲ್ಗಳು, ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ತೆರೆದೇ ಇರುತ್ತದೆ. ರಾತ್ರಿ 8 ಗಂಟೆಯ ವರೆಗೆ ಮಾತ್ರ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಬಿಟ್ಟು ಉಳಿದ ಅಂದರೆ ಶೇ. 50ರಷ್ಟು ಕಾರ್ಖಾನೆಗಳು ಕೆಲಸ ಸ್ಥಗಿತಗೊಳಿಸಿವೆ.
ಕರ್ಫ್ಯೂ ನಡುವೆಯೂ ತರಕಾರಿ ಮಾರುಕಟ್ಟೆಯಲ್ಲಿ ಜನಸಮೂಹ 320 ದಿನಗಳ ಬಳಿಕ ಸ್ಥಳೀಯ ರೈಲುಗಳಲ್ಲಿ ಸಾರ್ವಜನಿಕರ ಸಂಚಾರ
ತುರ್ತು ಹಾಗೂ ತೀರ ಅಗತ್ಯ ಕೆಲಸವಿರುವ ಸಾರ್ವಜನಿಕರು ಮುಂದಿನ 15 ದಿನಗಳವರೆಗೆ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. 320 ದಿನಗಳ ಬಳಿಕ ಸಾಮಾನ್ಯ ಜನರಿಗೆ ನಿಗದಿತ ಸಮಯದಲ್ಲಿ (ಬೆಳಗ್ಗೆ 7ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 4 ರಿಂದ ರಾತ್ರಿ 9) ಸ್ಥಳೀಯ ರೈಲುಗಳಲ್ಲಿ ಸಂಚರಿಸಲು ರೈಲ್ವೆ ಇಲಾಖೆ ಅನುಮತಿ ನೀಡಿದೆ. ಇನ್ನು ಅಗತ್ಯ ವಸ್ತುಗಳ ಸಾಗಾಟಕ್ಕೆ ಮುಂಬೈನ ಸ್ಥಳೀಯ ರೈಲು ಹಾಗೂ ಬಸ್ಗಳು ಸಂಚರಿಸಲಿವೆ.
ಅಗತ್ಯ ವಾಹನ ಸಂಚಾರಕ್ಕೆ ಇ-ಪಾಸ್ ಅಗತ್ಯವಿಲ್ಲ
ತುರ್ತು ಸೇವೆಗಳ ವಾಹನಗಳು ಸೇರಿದಂತೆ ಅಗತ್ಯ ವಾಹನಗಳ ಸಂಚಾರಕ್ಕೆ ಯಾವುದೇ ಇ-ಪಾಸ್ ಅಗತ್ಯವಿಲ್ಲ, ಮಾನ್ಯ ಕಾರಣ ತಿಳಿಸಿದರೆ ಸಾಕು ಎಂದು ಡಿಜಿಪಿ ಸಂಜಯ್ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಮಾನ್ಯ ಕಾರಣ ನೀಡಿ ಮನೆಯಿಂದ ಹೊರಬಂದ ಜನರಿಗೆ ಕೂಡ ಪೊಲೀಸ್ ಸಿಬ್ಬಂದಿ ದಂಡ ವಿಧಿಸಬಾರದು, ಲಾಠಿಚಾರ್ಜ್ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.
ಇದು ವೈರಸ್ ವಿರುದ್ಧದ ಯುದ್ಧವಾಗಿದೆ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಪಾಂಡೆ ಜನರಲ್ಲಿ ಮನವಿ ಮಾಡಿದ್ದಾರೆ.
ಖಾಲಿಯಾಗಿರುವ ರಸ್ತೆ, ಪೌರ ಕಾರ್ಮಿಕರಿಂದ ಶುಚಿತ್ವ ಡಬಲ್ ಮ್ಯುಟೇಶನ್ ಎಂದರೇನು?
ವೈರಸ್ಗಳು ತಮ್ಮ ರೂಪವನ್ನು ಬದಲಾಯಿಸುತ್ತಾ ಹೊಸ ರೂಪ ಪಡೆದುಕೊಳ್ಳುತ್ತಲೇ ಇರುತ್ತವೆ. ವೈರಸ್ನಲ್ಲಿನ ಪ್ರತಿಯೊಂದು ಪ್ರಮುಖ ಬದಲಾವಣೆಯನ್ನು ರೂಪಾಂತರ ಎಂದು ಕರೆಯಲಾಗುತ್ತದೆ. ಕೊರೊನಾ ಕೂಡ ಈಗಾಗಲೇ ಬ್ರಿಟನ್, ದಕ್ಷಿಣ ಆಫ್ರಿಕಾ ಸೇರಿದಂತೆ ನಾನಾ ದೇಶದಲ್ಲಿ ರೂಪಾಂತರಗೊಂಡಿರುವುದು ನಮಗೆ ತಿಳಿದಿದೆ. ವೈರಸ್ನಲ್ಲಿ ಒಂದೇ ಸಮಯದಲ್ಲಿ ಎರಡು ಪ್ರಮುಖ ಬದಲಾವಣೆಯಾದರೆ ಅದನ್ನು ನಾವು 'ಡಬಲ್ ರೂಪಾಂತರ'(Double mutation) ಎಂದು ಕರೆಯುತ್ತೇವೆ.
ಭಾರತದಲ್ಲಿನ ಎರಡನೇ ಅಲೆಯು ಉಲ್ಬಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವಿಜ್ಞಾನಿಗಳು ಡಬಲ್ ರೂಪಾಂತರ ಪಡೆದ SARS-CoV-2 ಕೊರೊನಾ ವೈರಸ್ಗಳನ್ನು ಪತ್ತೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್ವರೆಗೆ 361 ಸ್ಯಾಂಪಲ್ಗಳನ್ನು ಟೆಸ್ಟ್ಗೆ ಒಳಪಡಿಸಲಾಗಿದ್ದು, ಇದರಲ್ಲಿ ಶೇ.61ರಷ್ಟು ಕೇಸ್ಗಳು ಡಬಲ್ ರೂಪಾಂತರ ಪ್ರಕರಣಗಳಾಗಿವೆ,
ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಈವರೆಗೆ 35,19,208 ಕೋವಿಡ್ ಕೇಸ್ಗಳು ವರದಿಯಾಗಿದ್ದು, 58,526 ಮಂದಿ ಮೃತಪಟ್ಟಿದ್ದಾರೆ. 5,93,042 ಕೇಸ್ಗಳು ಸಕ್ರಿಯವಾಗಿವೆ.