ಪಂಡರ್ಪುರ( ಮಹಾರಾಷ್ಟ್ರ): ಆಷಾಢ ಏಕಾದಶಿ ನಿಮಿತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪತ್ನಿ ರಶ್ಮಿ ಠಾಕ್ರೆ ಅವರು ಪಂಡರ್ಪುರದ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಮಹಾ ಪೂಜೆ ನಡೆಸಿದರು.
ಆಷಾಢ ಏಕಾದಶಿ: ವಿಠ್ಠಲ್ - ರುಕ್ಮಿಣಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಉದ್ಧವ್ ಠಾಕ್ರೆ - ಆಷಾಢ ಏಕಾದಶಿ
ಪಂಡರ್ಪುರದ ವಿಠ್ಠಲ್ - ರುಕ್ಮಿಣಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಎಲ್ಲೆಡೆ ಆಷಾಢ ಏಕಾದಶಿ ಆಚರಿಸಲಾಗ್ತಿದೆ. ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಠಾಕ್ರೆ, ಕೊರೊನಾ ಸಂಪೂರ್ಣ ನಿರ್ಮೂಲನೆಗೆ ಪ್ರಾರ್ಥಿಸಿದ್ದಾರೆ. ಈ ವೇಳೆ, ಕೇಶವ್ ಕೊಲ್ಟೆ ಮತ್ತು ಇಂದುಮತಿ ಕೊಲ್ಟೆ ಸಿಎಂ ಗೆ ಸಾಥ್ ನೀಡಿದ್ರು.
ನಂತರ, ಸಂತ ಕನ್ಹೋಪಾತ್ರರ ಹೆಸರಿನಲ್ಲಿ ಸಸಿ ನೆಡಲಾಯಿತು. ದೇವಾಲಯ ಸಮಿತಿ ರಚಿಸಿದ ಚಿತ್ರವನ್ನು ಉದ್ಘಾಟಿಸಲಾಯಿತು. ವಿಠ್ಠಲ್ - ರುಕ್ಮಿಣಿ ದೇವಸ್ಥಾನದ ಪ್ರಮುಖ ಪೂಜೆ ನೆರವೇರಿಸಲಾಯಿತು. ಈ ವೇಳೆ, ಸಿಎಂ ಅವರೊಂದಿಗೆ ಗಣ್ಯರು ಉಪಸ್ಥಿತರಿದ್ದರು. ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಪೂಜೆ ನಡೆದಿದೆ.