ಮಧುರೈ (ತಮಿಳುನಾಡು):ಉತ್ತರ ಪ್ರದೇಶ ರಾಜ್ಯದ ಲಖನೌದಿಂದ ರಾಮೇಶ್ವರಂಗೆ ಬರುತ್ತಿದ್ದ ಪ್ರವಾಸಿ ರೈಲಿನ ಖಾಸಗಿ ಕೋಚ್ಗೆ, ಮಧುರೈ ಸಮೀಪ ಬೆಂಕಿ ತಗುಲಿದೆ. ಈ ಅಗ್ನಿ ಅವಘಡದ ವೇಳೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ 9 ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ರೈಲಿನಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಿದರು. ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಖಾಸಗಿ ಕೋಚ್‌ನಲ್ಲಿದ್ದ ಅಕ್ರಮ ಎಲ್‌ಪಿಜಿ ಸಿಲಿಂಡರ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಉತ್ತರ ಪ್ರದೇಶದಿಂದ ಬರುತ್ತಿದ್ದ ಈ ರೈಲಿನ ಎರಡು ಖಾಸಗಿ ಕೋಚ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಮಧುರೈ ನಿಲ್ದಾಣದಲ್ಲಿ ರೈಲು ನಿಂತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿರುವುದರ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೈಲಿನಲ್ಲಿದ್ದ 60ಕ್ಕೂ ಹೆಚ್ಚು ಯಾತ್ರಾರ್ಥಿಗಳು:ರೈಲ್ವೆ ಇಲಾಖೆ ಹೇಳಿಕೆಯ ಪ್ರಕಾರ, ಈ ಹಿಂದೆ ನಾಗರ್‌ಕೋಯಿಲ್ ಜಂಕ್ಷನ್‌ನಿಂದ ಮಧುರೈಗೆ ಪ್ರಯಾಣಿಸುವಾಗ ಬೆಂಕಿ ಅವಘಡಕ್ಕೆ ಈಡಾದ ಕೋಚ್ ಅನ್ನು ರೈಲು ಸಂಖ್ಯೆ 16730, ಪುನಲೂರ್-ಮಧುರೈ ಎಕ್ಸ್‌ಪ್ರೆಸ್‌ಗೆ ಜೋಡಿಸಲಾಗಿತ್ತು. ನಿನ್ನೆ (ಆಗಸ್ಟ್ 25, 2023) ಮಧ್ಯಾಹ್ನ 3:47 ಕ್ಕೆ ಮಧುರೈಗೆ ಆಗಮಿಸಿದಾಗ, ಖಾಸಗಿ ಪಕ್ಷದ ಕೋಚ್ ಅನ್ನು ನಂತರ ಬೇರ್ಪಡಿಸಿ ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇರಿಸಲಾಗಿತ್ತು. ದಕ್ಷಿಣ ಭಾರತದಲ್ಲಿ ಸ್ವಾಮಿ ದರ್ಶನ ಪಡೆಯಲು60ಕ್ಕೂ ಹೆಚ್ಚು ಯಾತ್ರಾರ್ಥಿಗಳು ಆಗಸ್ಟ್ 17 ರಂದು ಉತ್ತರ ಪ್ರದೇಶದ ಲಖನೌದಿಂದ ರೈಲಿನಲ್ಲಿ ತಮಿಳುನಾಡಿಗೆ ಆಗಮಿಸಿದರು. ನಾಗರ್‌ಕೋಯಿಲ್‌ನ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆದ ಅವರು ಇಂದು(ಶನಿವಾರ) ಮುಂಜಾನೆ ಮಧುರೈ ತಲುಪಿದ್ದಾರೆ. ಮಧುರೈ ರೈಲು ನಿಲ್ದಾಣದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಮಧುರೈ ಬೋಡಿ ಲಯನ್‌ನಲ್ಲಿ ಪ್ರವಾಸಿ ರೈಲನ್ನು ನಿಲ್ಲಿಸಲಾಗಿತ್ತು.
ಈ ವೇಳೆ ರೈಲಿನ ಖಾಸಗಿ ಕೋಚ್‌ನಲ್ಲಿದ್ದ ಪ್ರಯಾಣಿಕರು ಸಿಲಿಂಡರ್‌ನಿಂದ ಅಡುಗೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ರೈಲಿನಲ್ಲಿ ಟೀ ತಯಾರಿಸುತ್ತಿದ್ದಾಗ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಇದಾದ ನಂತರ ಯಾತ್ರಾರ್ಥಿಗಳು ಕಿರುಚುತ್ತಾ ಕೆಳಗಿಳಿದರು. 50ಕ್ಕೂ ಹೆಚ್ಚು ಪ್ರವಾಸಿಗರು ರೈಲಿನಿಂದ ಕೆಳಗಿಳಿದಿದ್ದಾರೆ. ನಂತರ ರೈಲಿನಲ್ಲಿ ಸಿಲುಕಿಕೊಂಡಿದ್ದ ಕೆಲವರನ್ನು ರಕ್ಷಣೆ ಮಾಡಲಾಗಿದೆ.