ಚೆನ್ನೈ (ತಮಿಳುನಾಡು):ಖ್ಯಾತ ನಟಿ ಜಯಪ್ರದಾ ಅವರಿಗೆ ಕೆಳ ಹಂತದ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಇಂದು (ಶುಕ್ರವಾರ) ಖಚಿತಪಡಿಸಿತು. 15 ದಿನದಲ್ಲಿ ಎಗ್ಮೋರ್ ಕೋರ್ಟ್‌ಗೆ ಶರಣಾಗುವಂತೆ ಹಾಗೂ 20 ಲಕ್ಷ ರೂ. ಠೇವಣಿ ಇಡುವಂತೆ ಸೂಚಿಸಿದೆ.
ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಜಯಪ್ರದಾ, ಸಂಸತ್ ಸದಸ್ಯರಾಗಿದ್ದರು. ಚೆನ್ನೈನಲ್ಲಿ ರಾಮಕುಮಾರ್, ರಾಜ್ಬಾಬು ಎಂಬವರೊಂದಿಗೆ ಸೇರಿ ಚಿತ್ರಮಂದಿರವನ್ನು ನಡೆಸುತ್ತಿರುವ ಇವರು, ಕಾರ್ಮಿಕರಿಂದ ಸಂಗ್ರಹಿಸಿದ ಇಎಸ್‌ಐ ಹಣವನ್ನು ರಾಜ್ಯ ವಿಮಾ ನಿಗಮಕ್ಕೆ ಪಾವತಿಸದ ಆರೋಪ ಎದುರಿಸುತ್ತಿದ್ದಾರೆ.
ಇಎಸ್‌ಐ ಕಂಪನಿ ಕಡೆಯಿಂದ ಇಗ್ಮೋರ್ ಕೋರ್ಟ್ನಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಆಗಸ್ಟ್ 10ರಂದು ಜಯಪ್ರದಾ ಸೇರಿದಂತೆ ಮೂವರಿಗೆ ಜಾಮೀನುರಹಿತ 6 ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡವನ್ನು ಕೋರ್ಟ್ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಜಯಪ್ರದಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಕಾರ್ಮಿಕರ ಇಎಸ್‌ಐ ಹಣವನ್ನು ಹಿಂದಿರುಗಿಸಿದರೆ ಶಿಕ್ಷೆ ರದ್ದುಪಡಿಸುವುದಾಗಿ ಹೈಕೋರ್ಟ್ ಹೇಳಿತ್ತು.
ಜಯಪ್ರದಾ ಪರ ವಾದ ಮಂಡಿಸಿದ ವಕೀಲರು, ''ಕಾರ್ಮಿಕರಿಗೇಕೆ ಹಣ ಪಾವತಿಯಾಗಿಲ್ಲ ಎಂಬ ಕುರಿತು ಇಎಸ್‌ಐ ಯಾವುದೇ ವಿವರಣೆ ಸ್ವೀಕರಿಸಿಲ್ಲ. ಯಾವುದೇ ನೊಟೀಸ್ ಕಳುಹಿಸದೇ ನೇರವಾಗಿ ಇಎಸ್‌ಐ ಪರವಾಗಿ ಪ್ರಕರಣ ದಾಖಲಿಸಲಾಗಿದೆ'' ಎಂದು ಹೇಳಿದರು. ಆದರೆ, ಇಂದಿನ ವಿಚಾರಣೆ ವೇಳೆ, ಕಾರ್ಮಿಕರ ಇಎಸ್‌ಐ ಹಣ ಪಾವತಿಸುವ ಬಗ್ಗೆ ಜಯಪ್ರದಾ ಕಡೆ ವಕೀಲರು, ಯಾವುದೇ ವರದಿ ಸಲ್ಲಿಸದ ಕಾರಣ ನ್ಯಾಯಾಲಯವು ಅರ್ಜಿ ವಜಾಗೊಳಿಸಿತು. ಇದೇ ವೇಳೆ, ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಪ್ರಧಾನ ಸತ್ರ ನ್ಯಾಯಾಲಯಕ್ಕೆ ಹೋಗುವಂತೆ ಜಯಪ್ರದಾ ಅವರಿಗೆ ಉಚ್ಛ ನ್ಯಾಯಾಲಯವು ನಿರ್ದೇಶನ ನೀಡಿ, 15 ದಿನದಲ್ಲಿ ಎಗ್ಮೋರ್ ಕೋರ್ಟ್‌ಗೆ ಶರಣಾಗಿ 20 ಲಕ್ಷ ರೂ. ಠೇವಣಿ ಇಡುವಂತೆ ಆದೇಶಿಸಿತು.