ಮಧುರೈ:ಮಹಿಳೆಯೊಬ್ಬಳು ತನ್ನ ತೃತೀಯ ಲಿಂಗಿ (ಟ್ರಾನ್ಸ್‌ಮ್ಯಾನ್) ಸಹಚರನೊಂದಿಗೆ ವಾಸಿಸಲು ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಶುಕ್ರವಾರ ತೀರ್ಪು ನೀಡಿದೆ. ಮದುವೆ ಮಾಡಿಕೊಂಡಿರುವ ಮಹಿಳೆ ಮತ್ತು ತೃತೀಯಲಿಂಗಿ ನಡುವಿನ ಸಂಬಂಧವನ್ನು ಅವರ ಕುಟುಂಬಗಳು ವಿರೋಧಿಸಿ ಜೋಡಿಯನ್ನು ಬೇರ್ಪಡಿಸಿದ್ದು, ಪರಿಹಾರ ಕೋರಿ ವಿರ್ಧುನಗರದ ತೃತೀಯಲಿಂಗಿ ಮಧುರೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ತೃತೀಯ ಲಿಂಗಿ ಸಲ್ಲಿಸಿರುವ ಅರ್ಜಿಯಲ್ಲಿ, "ನಾನು ದಿಂಡುಗಲ್ ಜಿಲ್ಲೆಯ ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇನೆ. ನಾವು ಜುಲೈ 7 ರಂದು ಮದುವೆಯಾಗಿದ್ದೇವೆ. ಆದರೆ, ಮಹಿಳೆಯ ಮನೆಯವರು ಜುಲೈ 16ರಂದು ನಮ್ಮ ಮದುವೆಯನ್ನು ಆಕ್ಷೇಪಿಸಿದ್ದಾರೆ. ನಾವು ವಾಸಿಸುತ್ತಿದ್ದ ಮನೆಗೆ ನುಗ್ಗಿ ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿ ಹೆಂಡತಿಯನ್ನು ಅಪಹರಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.