ಭೋಪಾಲ್: ತೃತೀಯ ಲಿಂಗಿಗಳಿಗಾಗಿಯೇ ಪ್ರತ್ಯೇಕ ಗುರುತಿನ ಚೀಟಿ ನೀಡಿದ್ದು, ಈ ವಿಭಿನ್ನ ಪ್ರಯತ್ನದಲ್ಲಿ ಮಧ್ಯಪ್ರದೇಶವು ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭೋಪಾಲ್ ಮೂಲದ ಅಂಜನಾ ಸಿಂಗ್ ಮತ್ತು ಫರುಖ್ ಜಮಾಲ್ ಅವರು, ತೃತೀಯ ಲಿಂಗಿಗಳಿಗಾಗಿಯೇ ಮೀಸಲಾದ ಪೋರ್ಟಲ್ ಮೂಲಕ ಗುರುತಿನ ಚೀಟಿ ಪಡೆದಿದ್ದಾರೆ. ವರದಿಗಳ ಪ್ರಕಾರ, ತೃತೀಯ ಲಿಂಗಿಗಳ ಸಮುದಾಯಕ್ಕೆ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಹೊರತುಪಡಿಸಿ ಗುರುತಿನ ಚೀಟಿ ನೀಡುವ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ಇರಲಿಲ್ಲ.