ಕರ್ನಾಟಕ

karnataka

By

Published : Jan 10, 2022, 8:21 PM IST

ETV Bharat / bharat

ಅಭಿನಂದನ್ ವರ್ಧಮಾನ್​​ ರೀತಿ ಮೀಸೆ ಬಿಟ್ಟ ಕಾನ್ಸ್‌ಟೇಬಲ್‌ ಅಮಾನತು, ಮರು ಸೇರ್ಪಡೆ

ಉದ್ದನೆಯ ಮೀಸೆ ಬಿಟ್ಟಿದ್ದಕ್ಕಾಗಿ ಪೊಲೀಸ್ ಇಲಾಖೆಯಿಂದ ಅಮಾನತುಗೊಂಡಿದ್ದ ಪೊಲೀಸ್ ಕಾನ್ಸ್​ಟೇಬಲ್​ ಇದೀಗ ಮರಳಿ ಸೇವೆಗೆ ಸೇರ್ಪಡೆಯಾಗಿದ್ದಾರೆ.

Rakesh Rana mustache controversy
Rakesh Rana mustache controversy

ಭೋಪಾಲ್​(ಮಧ್ಯಪ್ರದೇಶ):ಬಾಲಾಕೋಟ್​ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ ಅವರಂತೆ ಮೀಸೆ ಬಿಟ್ಟು ನೌಕರಿಯಿಂದ ಅಮಾನತಾಗಿದ್ದ ಪೊಲೀಸ್‌ ಕಾನ್ಸ್​ಟೇಬಲ್​ ಇದೀಗ ಮರುಸೇರ್ಪಡೆಯಾಗಿದ್ದಾರೆ.

ಮಧ್ಯಪ್ರದೇಶದ ಕಾನ್ಸ್​ಟೇಬಲ್​ ರಾಕೇಶ್ ರಾಣಾ ವಿಂಗ್ ಕಮಾಂಡರ್​​ ಅಭಿನಂದನ್​ ವರ್ಧಮಾನ್​​ ಅವರಂತೆ ಮೀಸೆ ಬಿಟ್ಟಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಟ್ರಿಮ್​ ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಇವರು ಅಧಿಕಾರಿಗಳ ಆದೇಶ ಧಿಕ್ಕರಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಅಮಾನತು ಮಾಡಿ ಸಹಾಯಕ ಪೊಲೀಸ್ ಮಹಾನಿರೀಕ್ಷಕರು ಆದೇಶ ಹೊರಡಿಸಿದ್ದರು.


ಈ ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಮಧ್ಯಪ್ರದೇಶ ಗೃಹ ಸಚಿವ ಡಾ. ನರೋತ್ತಮ ಮಿಶ್ರಾ ಡಿಜಿಪಿಯಿಂದ ವರದಿ ಕೇಳಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸೇವೆಗೆ ಮರುಸೇರ್ಪಡೆ ಮಾಡಿಕೊಳ್ಳಲಾಗಿದೆ. ಜೊತೆಗೆ, ರಾಕೇಶ್ ರಾಣಾ ಅವರಿಂದಲೂ ಮಾಹಿತಿ ಪಡೆದುಕೊಳ್ಳುವಂತೆ ಡಿಜಿಪಿಗೆ ಸೂಚಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಕೇಶ್ ರಾಣಾ, 'ತಾವು ರಜಪೂತ್ ಆಗಿರುವ ಕಾರಣ ಮೀಸೆ ಕತ್ತರಿಸುವುದಿಲ್ಲ. ಅನೇಕ ಐಪಿಎಸ್​​ ಅಧಿಕಾರಿಗಳು ಇದೇ ರೀತಿಯ ಮೀಸೆ ಹೊಂದಿದ್ದಾರೆ. ಆದರೆ ನನಗೆ ಮಾತ್ರ ಯಾಕೆ ಈ ಶಿಕ್ಷೆ? ಎಂದು ಕೇಳಿದ್ದಾರೆ.

ABOUT THE AUTHOR

...view details