ಬೋಪಾಲ್:ಬಿಹಾರ ವಿಧಾನಸಭೆ ಫಲಿತಾಂಶದ ಜತೆಗೆ ನಾಳೆ ಮಧ್ಯ ಪ್ರದೇಶದಲ್ಲಿನ 28 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಹಿರಂಗಗೊಳ್ಳಲಿದ್ದು, ಅಲ್ಲಿನ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಕಳೆದ 7 ತಿಂಗಳ ಹಿಂದೆ ಕಾಂಗ್ರೆಸ್ನ 25 ಶಾಸಕರು ದಿಢೀರ್ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರಿಂದ ಈ ಉಪ ಚುನಾವಣೆ ನಡೆದಿದ್ದು, ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ ಪಡೆದುಕೊಳ್ಳಲು 9 ಸೀಟು ಅವಶ್ಯಕತೆ ಇದೆ. ಸದ್ಯ ಕಾಂಗ್ರೆಸ್ 87 ಶಾಸಕರನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 116 ಆಗಿದೆ.