ಕರ್ನಾಟಕ

karnataka

ETV Bharat / bharat

ಚಿನ್ನ ಕಳ್ಳಸಾಗಣೆ ಹಗರಣ: ಕೇರಳ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಬಂಧನ - gold scam case

Sivashankar
ಶಿವಶಂಕರ್​

By

Published : Nov 24, 2020, 12:06 PM IST

Updated : Nov 24, 2020, 1:28 PM IST

11:57 November 24

ಕೇರಳ ಚಿನ್ನ ಕಳ್ಳಸಾಗಣೆ ಕೇಸ್​

ತಿರುವನಂತಪುರಂ:ಕೇರಳ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ವಿರುದ್ಧ ದೋಷಾರೋಪಣೆ ಸಾಕ್ಷ್ಯಗಳು ದೊರೆತಿವೆ ಎಂದು ಕಸ್ಟಮ್ಸ್ ತಂಡ ತಿಳಿಸಿದೆ.

ಇಡಿ ಪ್ರಕಾರ, ಈ ವರ್ಷದ ಜುಲೈನಲ್ಲಿ ಚಿನ್ನದ ಕಳ್ಳಸಾಗಣೆ ಹಗರಣ ಹೊರಬಿದ್ದ ನಂತರ ಶಿವಶಂಕರ್ ಅವರು ಅಮಾನತುಗೊಂಡರು. ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಗೆ ಕಳ್ಳಸಾಗಣೆ ಡೀಲ್​ನಿಂದ ಬರುವ ಆದಾಯ ತಡೆಯಲು ಸಹಾಯ ಮಾಡಿದ್ದರು ಎಂದು ಆರೋಪಿಸಲಾಗಿತ್ತು.  

ಒಂದು ವರ್ಷದ ಹಿಂದೆ ಯುಎಇ ದೂತಾವಾಸದಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದ ಸ್ವಪ್ನಾ ಅವರೊಂದಿಗೆ ಜಂಟಿ ಬ್ಯಾಂಕ್ ಲಾಕರ್ ತೆರೆಯಲು ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಅಯ್ಯರ್ ಅವರನ್ನು ಶಿವಶಂಕರ್ ಪ್ರೇರೇಪಿಸಿದ್ದರು ಎಂದು ಇಡಿ ಹೇಳಿತ್ತು.

ಎಂಎನ್‌ಎಸ್ ನಾಯಕ ಜಮೀಲ್ ಶೈಖ್​​ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು: ಸಿಸಿಟಿವಿ ವಿಡಿಯೋ!

ಜಾರಿ ನಿರ್ದೇಶನಾಲಯ (ಇಡಿ) ಅಕ್ಟೋಬರ್​ ತಿಂಗಳಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಅಮಾನತುಗೊಳಿಸಿತ್ತು. ಲಾಂಡರಿಂಗ್, ಯುಎಇ ರಾಜತಾಂತ್ರಿಕ ಸರಕುಗಳ ಮೂಲಕ ಚಿನ್ನ ಕಳ್ಳಸಾಗಣೆಯು ತನಿಖೆಯ ಸಮಯದಲ್ಲಿ ಹೊರಬಿದ್ದಿತ್ತು. 

Last Updated : Nov 24, 2020, 1:28 PM IST

ABOUT THE AUTHOR

...view details