ಕರ್ನಾಟಕ

karnataka

ETV Bharat / bharat

ಲಗೇಜುಗಳ ಸಮೇತ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆ ತೊರೆದ ಉದ್ಧವ್ ಠಾಕ್ರೆ!

ಬಂಡಾಯ ಶಾಸಕರು ತಂಗಿರುವ ಅಸ್ಸೋಂನ ಗುವಾಹಟಿಗೆ ಮತ್ತೆ ನಾಲ್ವರು ಶಾಸಕರು ತಲುಪಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ.

Luggage being moved out from Versha Bungalow of Maharashtra CM Uddhav Thackeray in Mumbai
ಸಿಎಂ ಅಧಿಕೃತ ನಿವಾಸ ತೊರೆದ ಉದ್ಧವ್​ ಠಾಕ್ರೆ

By

Published : Jun 22, 2022, 10:02 PM IST

Updated : Jun 22, 2022, 10:31 PM IST

ಮುಂಬೈ/ಗುವಾಹಟಿ:ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ ತೀವ್ರಗೊಳ್ಳುತ್ತಿರುವ ಮಧ್ಯೆಯೇ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ತೊರೆದಿದ್ದಾರೆ. 'ವರ್ಷಾ ಬಂಗಲೆ'ಯಿಂದ ಇಂದು ರಾತ್ರಿ ತಮ್ಮ ಸಾಮಗ್ರಿಗಳನ್ನು ಅವರು ಖಾಲಿ ಮಾಡಿದರು.

ತಮ್ಮದೇ ಪಕ್ಷದ ಶಾಸಕರ ಬಂಡಾಯದಿಂದ ಮಹಾವಿಕಾಸ್​ ಆಘಾಡಿ ಸರ್ಕಾರದಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಹೀಗಾಗಿ ಸಂಜೆ ಫೇಸ್​ಬುಕ್​​ ಲೈವ್​ ಮೂಲಕ ಮಾತನಾಡಿದ್ದ ಸಿಎಂ ಉದ್ಧವ್​, ಯಾವುದೇ ಒಬ್ಬ ಶಾಸಕ ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಬಯಸಿದರೆ, ನಾನು ಬಂಗಲೆಯಿಂದ (ಸಿಎಂ ಅಧಿಕೃತ ನಿವಾಸ) ಖಾಸಗಿ ನಿವಾಸ 'ಮಾತೋಶ್ರೀ'ಗೆ ನನ್ನೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಿದ್ಧ ಎಂದಿದ್ದರು. ಅಂತೆಯೇ, ಈಗ ಏಕಾಏಕಿ ಸಿಎಂ ಅಧಿಕೃತ ನಿವಾಸ ತೊರೆದಿದ್ದಾರೆ.

ಲಗೇಜುಗಳ ಸಮೇತ ಮುಖ್ಯಮಂತ್ರಿಗಳ ಅಧಿಕೃತ ಬಂಗಲೆ ತೊರೆದ ಉದ್ಧವ್ ಠಾಕ್ರೆ

ಇದೇ ವೇಳೆ ಉದ್ಧವ್ ಠಾಕ್ರೆ ಅವರ ನಿವಾಸ 'ಮಾತೋಶ್ರೀ' ಹೊರಗೆ ಶಿವಸೇನೆ ಕಾರ್ಯಕರ್ತರು ಜಮಾಯಿಸಿ, ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತ, ಬಂಡಾಯ ನಾಯಕ ಏಕನಾಥ ಶಿಂಧೆ ಶಿವಸೇನೆ ಉಳಿಯಬೇಕಾದರೆ 'ಅಸ್ವಾಭಾವಿಕ ಮೈತ್ರಿ'ಯಿಂದ ಹೊರಬರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

'ಕಳೆದ ಎರಡೂವರೆ ವರ್ಷಗಳಲ್ಲಿ ಮಹಾವಿಕಾಸ್​ ಆಘಾಡಿ ಸರ್ಕಾರದಿಂದ ಕೆಲ ಪಕ್ಷಗಳಿಗೆ ಮಾತ್ರ ಲಾಭವಾಗಿದೆ. ಆದ್ದರಿಂದ ಶಿವಸೇನೆ ಪಕ್ಷದ ಉಳಿವಿಗಾಗಿ ಅಸ್ವಾಭಾವಿಕ ಮೈತ್ರಿಯಿಂದ ಹೊರಬರುವುದು ಅತ್ಯಗತ್ಯ. ಮಹಾರಾಷ್ಟ್ರದ ಹಿತಾಸಕ್ತಿಯಲ್ಲಿ ಈಗ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ' ಎಂದು ಶಿಂಧೆ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಬಂಡಾಯ ಶಾಸಕರು ತಂಗಿರುವ ಅಸ್ಸೋಂನ ಗುವಾಹಟಿಗೆ ಮತ್ತೆ ನಾಲ್ವರು ಶಾಸಕರು ತಲುಪಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಮೈತ್ರಿಕೂಟದ ಸರ್ಕಾರ ಅಳಿವಿನ ಅಂಚಿಗೆ ಬಂದಂತೆ ಆಗಿದೆ.

ಇದನ್ನೂ ಓದಿ:ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್​ ಠಾಕ್ರೆ

Last Updated : Jun 22, 2022, 10:31 PM IST

ABOUT THE AUTHOR

...view details