ನವ ದೆಹಲಿ:ತಲೆಮರೆಸಿಕೊಂಡಿದ್ದಲೂಧಿಯಾನ ನ್ಯಾಯಾಲಯ ಸ್ಪೋಟದ ರೂವಾರಿ ಮತ್ತು ಉಗ್ರ ಹರ್‌ಪ್ರೀತ್ ಸಿಂಗ್ನನ್ನು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಮಲೇಷಿಯಾದ ಕೌಲಲಾಂಪುರ್ ವಿಮಾನ ನಿಲ್ದಾಣದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬರುವಾಗ ಆತನನ್ನು ಅರೆಸ್ಟ್ ಮಾಡಲಾಗಿದೆ.
ಪಾಕಿಸ್ತಾನದ ಇಂಟರ್ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ನ ಸಹವರ್ತಿಯೇ ಈ ಹರ್‌ಪ್ರೀತ್ ಸಿಂಗ್. 2021ರಲ್ಲಿ ಲೂಧಿಯಾನ ಕೋರ್ಟ್ ಆವರಣದಲ್ಲಿ ರೋಡ್ ಜೊತೆ ಸೇರಿ ಹರ್‌ಪ್ರೀತ್ ಸಿಂಗ್ ಬಾಂಬ್ ಸ್ಪೋಟಿಸಿದ್ದ. ಈ ಭಾರಿ ಸ್ಪೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದರು.