ಕರ್ನಾಟಕ

karnataka

ETV Bharat / bharat

2019ರಲ್ಲಿ ಲುಕ್​​ನಿಂದಲೇ ಪ್ರಸಿದ್ಧಿಯಾದ ರೀನಾ ದ್ವಿವೇದಿ ಈ ಬಾರಿಯೂ ಚುನಾವಣಾಧಿಕಾರಿಯಾಗಿ ಬಂದ್ರು! - ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರೀನಾ ದ್ವಿವೇದಿ

2019ರ ಲೋಕಸಭಾ ಚುನಾವಣೆಯಲ್ಲಿ ಮನೆ ಮಾತಾಗಿದ್ದ ಚುನಾವಣಾಧಿಕಾರಿ ರೀನಾ ದ್ವಿವೇದಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಮೋಹನ್‌ಲಾಲ್‌ಗಂಜ್ ವಿಧಾನಸಭಾ ಕ್ಷೇತ್ರದ ಗೋಸೈಗಂಜ್ ಬೂತ್‌ನಲ್ಲಿ ನಿಯೋಜನೆಗೊಂಡಿದ್ದಾರೆ

lucknow-polling-officer-reena-dwivedi-appeared-in-western-outfit
2019ರಲ್ಲಿ ಲುಕ್​​ನಿಂದಲೇ ಪ್ರಸಿದ್ಧಿಯಾದ ರೀನಾ ದ್ವಿವೇದಿ ಈ ಬಾರಿಯೂ ಚುನಾವಣಾಧಿಕಾರಿಯಾಗಿ ಬಂದ್ರು..!

By

Published : Feb 23, 2022, 2:15 PM IST

Updated : Feb 23, 2022, 3:01 PM IST

ಲಖನೌ(ಉತ್ತರ ಪ್ರದೇಶ):ಚುನಾವಣೆಯಲ್ಲಿ ಸಾಕಷ್ಟು ಹೆಸರು ಕೇಳಿಬರೋದು ರಾಜಕಾರಣಿಗಳದ್ದು. ಆದರೆ, ಆಗಾಗ ಸಿನಿಮಾ ನಟ-ನಟಿಯರ ಹೆಸರೂ ಕೇಳಿಬರುತ್ತದೆ. ಆದರೆ 2019ರ ಲೋಕಸಭಾ ಚುನಾವಣೆಯಿಂದ ಇಲ್ಲಿಯವರೆಗೆ ರಾಜಕಾರಣಿಯಲ್ಲದ, ಸಿನಿಮಾ ಸೆಲೆಬ್ರಿಟಿಯೂ ಅಲ್ಲದ ವ್ಯಕ್ತಿಯೊಬ್ಬರ ಹೆಸರು ಕೇಳಿಬರುತ್ತಿದೆ. ಅವರ ಹೆಸರು ರೀನಾ ದ್ವಿವೇದಿ.

ರೀನಾ ದ್ವಿವೇದಿ, 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿ. 2019ರ ಲೋಕಸಭಾ ಚುನಾವಣೆಯಲ್ಲಿ ಮನೆ ಮಾತಾಗಿದ್ದರು. ಚುನಾವಣಾಧಿಕಾರಿಯಾಗಿದ್ದ ಇವರು ಮತಗಟ್ಟೆಗೆ ಬಂದಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

2019ರಲ್ಲಿ ಹಳದಿ ಸೀರೆಯಲ್ಲಿ ಕಾಣಿಸಿಕೊಂಡಿದ್ದ ರೀನಾ ದ್ವಿವೇದಿ

2019ರ ಲೋಕಸಭಾ ಚುನಾವಣೆಯಲ್ಲಿ ಹಳದಿ ಬಣ್ಣದ ಸೀರೆ ಧರಿಸಿ ಬಂದಿದ್ದ ರೀನಾ ಅವರು ಈ ಬಾರಿ ಮೋಹನ್‌ಲಾಲ್‌ಗಂಜ್ ವಿಧಾನಸಭಾ ಕ್ಷೇತ್ರದ ಗೋಸೈಗಂಜ್ ಬೂತ್‌ನಲ್ಲಿ ನಿಯೋಜನೆಗೊಂಡಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಸ್ಲೀವ್​ಲೆಸ್ ಬ್ಲ್ಯಾಕ್ ಟಾಪ್ ಮತ್ತು ಪ್ಯಾಂಟ್ ಧರಿಸಿ ಬಂದಿದ್ದು, ಹೊಸ ಗೆಟಪ್​ನಲ್ಲಿ ಬಂದಿದ್ದ ಆಕೆಯನ್ನು ನೋಡಲು ಮತ ಹಾಕುವ ಮತದಾರರು ಮಾತ್ರವಲ್ಲದೇ ಸಾಮಾನ್ಯ ಜನರೂ ಮತಗಟ್ಟೆಯ ಬಳಿ ನೆರೆದಿದ್ದರು.

ಚುನಾವಣಾ ಕೆಲಸದಲ್ಲಿ ರೀನಾ ದ್ವಿವೇದಿ

ಜನರು ಮಾತ್ರವಲ್ಲದೇ, ಪೊಲೀಸರೂ ರೀನಾ ದ್ವಿವೇದಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು. 2017ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸರೋಜಿನಿನಗರ ವಿಧಾನಸಭೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆಗಲೂ ಇವರು ಸಾಮಾಜಿಕ ತಾಣಗಳಲ್ಲಿ ಸ್ವಲ್ಪಮಟ್ಟಿಗೆ ಪ್ರಖ್ಯಾತಿ ಪಡೆದುಕೊಂಡಿದ್ದರು.

ರೀನಾ ದ್ವಿವೇದಿ ಜೊತೆ ಅಭಿಮಾನಿಗಳ ಸೆಲ್ಫಿ

ಇದನ್ನೂ ಓದಿ:ಎಸ್​ಪಿಗೆ ಮತಹಾಕಿದರೆ ಗೂಂಡಾರಾಜ್​ ಬೆಂಬಲಿಸಿದಂತೆ : ಮಾಯಾವತಿ ಆರೋಪ

ತಮ್ಮ ಲುಕ್ ಜನಪ್ರಿಯವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೀನಾ ದ್ವಿವೇದಿ, ನನಗೆ ಫ್ಯಾಷನ್ ತುಂಬಾ ಇಷ್ಟ ಎಂದಿದ್ದಾರೆ. ಈ ಬಾರಿಯ ಚುನಾವಣೆಯ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಅವರು ಸದ್ಯಕ್ಕೆ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Last Updated : Feb 23, 2022, 3:01 PM IST

ABOUT THE AUTHOR

...view details