ಪಶ್ಚಿಮ ಬಂಗಾಳ: ಪರಿಶುದ್ದ ಸ್ನೇಹಕ್ಕೆ ಆಡಂಬರದ ಅಗತ್ಯವಿಲ್ಲ. ಅದಕ್ಕೆ ನಂಬಿಕೆ ಮತ್ತು ಸತ್ಯವೇ ಜೀವಾಳ. ಇದಕ್ಕೊಂದು ವಿಶೇಷ ನಿದರ್ಶನ ಸಿಕ್ಕಿದೆ. ಪಶ್ಚಿಮ ಬಂಗಾಳದ ಕಾಂಕ್ಸಾದ ಪಶ್ಚಿಮ ಬುರ್ದ್ವಾನ್‌ನಲ್ಲಿರುವ ಶಿವಪುರ ಪ್ರಾಥಮಿಕ ಶಾಲೆಯು ಕಳೆದ ಕೆಲವು ವರ್ಷಗಳಿಂದ ವಿಚಿತ್ರವಾದ ಪ್ರೇಮಕಥೆಯೊಂದಕ್ಕೆ ಸಾಕ್ಷಿಯಾಗಿದೆ. ಆದರೆ, ಇದು ಹುಡುಗ ಮತ್ತು ಹುಡುಗಿಯ ಪ್ರೇಮಕಥೆಯಲ್ಲ, ಬದಲಾಗಿ ವಿದ್ಯಾರ್ಥಿನಿ ಮತ್ತು ಸ್ಟಾರ್ಲಿಂಗ್ ಪಕ್ಷಿಯ ನಡುವಿನ ಅಪರೂಪದ ಪ್ರೇಮ.
ಹೌದು, ಶಿವಪುರದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಅಂಕಿತಾ ಬಗ್ದಿಯನ್ನು ಪ್ರತಿದಿನ ಭೇಟಿ ಮಾಡಲು ಸ್ಟಾರ್ಲಿಂಗ್ ಪಕ್ಷಿ ಮಿಥು ಆಕೆಯ ಸ್ಕೂಲ್ಗೆ ಆಗಮಿಸುತ್ತದೆ. ಅಂಕಿತಾಳನ್ನು ಮಿಥು ಪ್ರತಿ ದಿನ ಬೆಳಗ್ಗೆ ಬಂದು ಭೇಟಿ ಮಾಡುತ್ತಾಳೆ. ಗೆಳತಿಯ ಪ್ರಾರ್ಥನೆ ವೇಳೆ, ಕ್ಲಾಸ್ ರೂಂನಲ್ಲಿ, ಟಿಫಿನ್ ಟೈಮ್ ವೇಳೆ ಆಕೆಯೊಂದಿಗೆ ಶಾಲೆಯಲ್ಲಿದ್ದು ಸಮಯ ಕಳೆಯುತ್ತಾಳೆ. ಅಂಕಿತಾ ಕೂಡ ತನ್ನ ಸ್ನೇಹಿತೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಟಿಫಿನ್ ಸಮಯದಲ್ಲಿ ಮಿಥುಗೆ ಬಿಸ್ಕೆಟ್, ಹಣ್ಣು ಸೇರಿದಂತೆ ತಾನು ತರುವ ಆಹಾರ ಪದಾರ್ಥಗಳನ್ನು ನೀಡುತ್ತಾಳೆ.
ಇದನ್ನೂ ಓದಿ:ಇಬ್ಬರು ಹುಡುಗಿಯರ ಪ್ರೇಮಕಥೆ : ಸಹಜೀವನ ನಡೆಸಲು ಪೊಲೀಸರಿಂದ ಒಪ್ಪಿಗೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲೆಯ ಪ್ರಭಾರ ಶಿಕ್ಷಕ ರಾಮದಾಸ್ ಸೊರೇನ್,"ಇದು ಎಲ್ಲೂ ಕಾಣದ ವಿಶೇಷ ಸ್ನೇಹ. ಇಡೀ ಶಾಲೆಯು ಸ್ಟಾರ್ಲಿಂಗ್ ಹಕ್ಕಿಯ ಪ್ರೀತಿಗೆ ಮನಸೋತಿದೆ. ಟಿಫಿನ್ ಸಮಯದಲ್ಲಿ ಪ್ರತಿದಿನ ಮಿಥು ಪಕ್ಷಿಯು ಅಂಕಿತಾಳ ಕೈಯಿಂದ ಕೇಕ್ ಮತ್ತು ಬಿಸ್ಕತ್ತುಗಳನ್ನು ತಿನ್ನುತ್ತದೆ. ಶಾಲೆ ಮುಗಿದ ನಂತರ ಸರಿಯಾಗಿ ಮಿಥು ತನ್ನ ಮರದ ಮನೆಗೆ ಹಿಂತಿರುಗುತ್ತದೆ. ಜೊತೆಗೆ, ಇತರೆ ಮಕ್ಕಳೊಂದಿಗೂ ಆಟವಾಡುತ್ತಾಳೆ. ವಿಶೇಷ ಅಂದ್ರೆ, ಅಂಕಿತಾ ಶಾಲೆಗೆ ಬಾರದಿದ್ದಾಗ ಮಿಥೂ ಕೂಡ ಬಂಕ್ ಮಾಡುತ್ತಾಳೆ. ಅದೊಂದು ದಿನ ಅಂಕಿತಾ ಶಾಲೆಗೆ ಬಾರದ್ದನ್ನು ಕಂಡು ವಿದ್ಯಾರ್ಥಿನಿ ಮನೆಗೆ ಹಾರಿ ಹೋದವಳು ಅಂದು ಬಾರಲೇ ಇಲ್ಲ" ಎಂದರು.