ನವದೆಹಲಿ: ಹತ್ತನೇ ತರಗತಿಯ ಸಿಬಿಎಸ್‌ಇಪರೀಕ್ಷೆಯಲ್ಲಿ ಸ್ತ್ರೀದ್ವೇಷದ ಪ್ರಶ್ನೆಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಶಿಕ್ಷಣ ಮತ್ತು ಪರೀಕ್ಷೆಗಳ ಗುಣಮಟ್ಟವನ್ನು ಈ ಪ್ರಶ್ನೆಗಳು ಬಿಂಬಿಸುತ್ತವೆ ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ ಅವರು, ನಿಸ್ಸಂಶಯವಾಗಿ ಇದು ಸ್ತ್ರೀದ್ವೇಷ. ಸಂಬಂಧಿತ ವಿಷಯವನ್ನು ಪಠ್ಯದಿಂದ ತಕ್ಷಣವೇ ಹಿಂಪಡೆಯುವುದು ಮಾತ್ರವಲ್ಲದೇ ಕೇಂದ್ರ ಸರ್ಕಾರ ಈ ಬಗ್ಗೆ ಕ್ಷಮೆಯಾಚಿಸಬೇಕು ಮತ್ತು ಘಟನೆಯ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರಿಗೆ ನೀಡುವ ವಿಮೋಚನೆ ಮಕ್ಕಳ ಮೇಲಿನ ಪಾಲಕರ ಅಧಿಕಾರ ನಾಶ ಮಾಡುತ್ತದೆ ಎಂಬುದನ್ನು ಜನರು ಗ್ರಹಿಸಿಕೊಳ್ಳಲು ಹಿಂದೆ ಬಿದ್ದಿದ್ದರು. ಪುರುಷನನ್ನು ಅವನ ಸ್ಥಾನದಿಂದ ಕೆಳಗಿಳಿಸುವಲ್ಲಿ ಮಹಿಳೆಯರು ತಮ್ಮನ್ನು ತಾವು ಕಳೆದುಕೊಂಡರು. ಆದರೆ, ಮಹಿಳೆಯರು ತಮ್ಮ ಪತಿಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ವಿಧೇಯತೆ ಗಳಿಸಬಹುದು ಎಂದು ಪ್ರಶ್ನೆಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಸದನದಲ್ಲಿ ಒತ್ತಿ ಹೇಳಿದರು.
ಇದನ್ನೂ ಓದಿ:Watch - ನಮಸ್ತೆ ಹೇಳಿಲ್ಲ ಅಂತಾ ವ್ಯಕ್ತಿಗೆ ಶಾಸಕನಿಂದ ಕಪಾಳಮೋಕ್ಷ ಆರೋಪ
ಇದೇ ವೇಳೆ ಕಾಂಗ್ರೆಸ್ ಐಯುಎಂಎಲ್, ಎನ್‌ಸಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಸಂಸದರು ಈ ವಿಷಯದ ಬಗ್ಗೆ ಸರ್ಕಾರದಿಂದ ಸ್ಪಷ್ಟೀಕರಣಕ್ಕೆ ಒತ್ತಾಯಿಸಿ ಸಭಾತ್ಯಾಗ ಮಾಡಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣತಜ್ಞರ ಕಳವಳಗಳಿಗೆ ನಾನು ನನ್ನ ಧ್ವನಿಯನ್ನು ಸೇರಿಸುತ್ತೇನೆ ಮತ್ತು ಸಿಬಿಎಸ್ಸಿ ನಡೆಸುವ ಪ್ರಮುಖ ಪರೀಕ್ಷೆಯಲ್ಲಿ ಸ್ತ್ರೀದ್ವೇಷದ ವಿಷಯಗಳ ಬಗ್ಗೆ ನಾನು ಬಲವಾದ ಆಕ್ಷೇಪಣೆಗಳನ್ನು ಎತ್ತುತ್ತೇನೆ ಎಂದು ಸೋನಿಯಾ ಗಾಂಧಿ ಹರಿಹಾಯ್ದರು.