ಕರ್ನಾಟಕ

karnataka

ETV Bharat / bharat

ಪೊಲೀಸರಿಂದಲೇ ಬುಡಕಟ್ಟು ಮಹಿಳೆ ಮೇಲೆ ಗ್ಯಾಂಗ್​ ರೇಪ್​:ಸಂತ್ರಸ್ತೆಯ ಜೀವನ್ಮರಣ ಹೋರಾಟ - ಗುಪ್ತಾಂಗಗಳಿಗೆ ಹಾನಿ

ಜಾರ್ಖಂಡ್‌ನ ಲೋಹರ್‌ಡಗಾ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆ ಮೇಲೆ ಇಬ್ಬರು ಪೊಲೀಸರು ಗ್ಯಾಂಗ್​ ರೇಪ್ ಎಸಗಿದ್ದಾರೆ. ಅಲ್ಲದೇ, ಲೈಂಗಿಕ ದೌರ್ಜನ್ಯದ ಸಮಯದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಕಾಮುಕರು ಹಾನಿಗೊಳಿಸಿದ್ದಾರೆ. ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿದೆ ಎಂದು ಹೇಳಲಾಗುತ್ತಿದೆ.

lohardaga-rape-victim-battling-for-life-at-ranchi-rims-condition-critical-doc
ಪೊಲೀಸರಿಂದ ಬುಡಕಟ್ಟು ಮಹಿಳೆ ಮೇಲೆ ಗ್ಯಾಂಗ್​ ರೇಪ್​: ಸಂತ್ರಸ್ತೆಯ ಜೀವನ್ಮರಣ ಹೋರಾಟ

By

Published : Oct 7, 2022, 7:43 PM IST

ಲೋಹರ್‌ಡಗಾ (ಜಾರ್ಖಂಡ್): ಜಾರ್ಖಂಡ್‌ನಲ್ಲಿ ಹೇಯ ಕೃತ್ಯ ನಡೆದಿದೆ. ಇಬ್ಬರು ಕಾನ್​ಸ್ಟೇಬಲ್​ಗಳು ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆ ಗುಪ್ತಾಂಗಗಳಿಗೆ ಹಾನಿಗೊಳಿಸಿದ್ದಾರೆ. ಇದರಿಂದ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಲೋಹರ್‌ಡಗಾ ಜಿಲ್ಲೆಯಲ್ಲಿ ಅಕ್ಟೋಬರ್ 4ರಂದು ಈ ನೀಚ ಕೃತ್ಯ ಜರುಗಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ. ಲೈಂಗಿಕ ದೌರ್ಜನ್ಯದ ಸಮಯದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಹಾನಿಗೊಳಿಸಿದ್ದಾರೆ ಎಂಬ ಆರೋಪಿಸಲಾಗಿದೆ. ಸಂತ್ರಸ್ತೆಯನ್ನು ಲೋಹರ್‌ಡಗಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದರು ಮತ್ತು ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್​)ಗೆ ರವಾನಿಸಲಾಗಿದೆ.

ಡಾ.ಶೀತಲ್ ಮಾಳವಾ ಅವರ ಮೇಲ್ವಿಚಾರಣೆಯಲ್ಲಿ ರಿಮ್ಸ್​ನಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಕೆ ಸ್ಥಿತಿ ಚಿಂತಾಜನಕವಾಗಿದೆ. ಆರೋಗ್ಯ ಸ್ಥಿತಿ ಸ್ಥಿರವಾಗದ ಹೊರತು ಏನನ್ನೂ ಹೇಳಲು ಸಾಧ್ಯವಿಲ್ಲ. ಗುಪ್ತಾಂಗಗಳಿಗೆ ತೀವ್ರ ಗಾಯಗಳಾಗಿವೆ. ರಕ್ತಸ್ರಾವ ಇನ್ನೂ ನಿಂತಿಲ್ಲ. ರಕ್ತಸ್ರಾವ ನಿಂತ ನಂತರ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತೊಂದೆಡೆ, ಜಾರ್ಖಂಡ್ ಡಿಜಿಪಿ ನೀರಜ್ ಸಿನ್ಹಾ, ಈ ಅತ್ಯಾಚಾರ ಪ್ರಕರಣದ ಬಗ್ಗೆ ಸಮಗ್ರವಾದ ಮಾಹಿತಿ ಸಲ್ಲಿಸುವಂತೆ ರಾಂಚಿ ಡಿಐಜಿ ಅನೀಶ್ ಗುಪ್ತಾ ಅವರಿಗೆ ಸೂಚಿಸಿದ್ದಾರೆ. ಅಂತೆಯೇ, ಈ ಪ್ರಕರಣದ ಮಾಹಿತಿ ನೀಡಲು ಡಿಐಜಿ ಅನೀಶ್ ಗುಪ್ತಾ ಜಾರ್ಖಂಡ್ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇತ್ತ, ಬುಡಕಟ್ಟು ಮಹಿಳೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಜನರು ಬಾಕ್ಸೈಟ್ ಅದಿರು ಗಣಿ ಸ್ಥಗಿತಗೊಳಿಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಎರಡನೇ ಮದುವೆಗೆ ನಿರಾಕರಣೆ: ಯುವತಿಗೆ ಬೆಂಕಿ ಹಚ್ಚಿದ ಪ್ರಿಯಕರ.. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

ABOUT THE AUTHOR

...view details