ವಿಶಾಖಪಟ್ಟಣಂ(ಆಂಧ್ರಪ್ರದೇಶ):ಸಮುದಾಯವೊಂದರ ನಾಯಕ ಭಾಷಣ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
Live Death Video: ಮಾತನಾಡುತ್ತಲೇ ಹೃದಯಾಘಾತವಾಗಿ ಕುಸಿದು ಬಿದ್ದು ವ್ಯಕ್ತಿ ಸಾವು - ಹೃದಯಾಘತದಿಂದ ವ್ಯಕ್ತಿ ಸಾವು
ವ್ಯಕ್ತಿಯೋರ್ವ ಮಾತನಾಡುತ್ತಲೇ ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದು, ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
Live death: ಮಾತನಾಡುತ್ತಲೇ ಕುಸಿದು ಬಿದ್ದು, ಸಮುದಾಯದ ಮುಖಂಡ ಸಾವು
ಪೆದ್ದಾಡ ಪ್ರಕಾಶ್ ರಾವ್ ಮೃತಪಟ್ಟ ವ್ಯಕ್ತಿ. ಇವರು ಮಾದಿಗ ರಿಸರ್ವೇಷನ್ ಫೈಟಿಂಗ್ ಗ್ರೂಪ್ನ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು. ಚೋಡವರಂ ಎಂಬಲ್ಲಿ ಎಂಆರ್ಪಿಎಸ್ ಸಭೆಯೊಂದರಲ್ಲಿ ಮಾತನಾಡುವ ವೇಳೆ ಆಕಸ್ಮಿಕವಾಗಿ ಕುಸಿದುಬಿದ್ದರು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೂ, ಅಷ್ಟೊತ್ತಿಗೆ ವ್ಯಕ್ತಿ ಮೃತಪಟ್ಟಿದ್ದಾರೆ. ವಿಶಾಖಪಟ್ಟಣಂನಲ್ಲೇ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಆಫ್ರಿಕಾದ ಸಿಯೆರಾ ಲಿಯೋನ್ನಲ್ಲಿ ತೈಲ ಟ್ಯಾಂಕರ್ ಸ್ಫೋಟ: 92 ಮಂದಿ ಸಜೀವ ದಹನ