ಕರ್ನಾಟಕ

karnataka

ETV Bharat / bharat

ಭಾರ ಎತ್ತಿ.. ದೀರ್ಘಾಯುಷಿಗಳಾಗಿ: ಸಂಶೋಧನೆಯ ಸಿಹಿ ಸುದ್ದಿ ಬಹಿರಂಗ - ಅಕಾಲಿಕ ಮರಣದ ಅಪಾಯ

ಭಾರ ಎತ್ತುವುದು ಮತ್ತು ಏರೋಬಿಕ್ ವ್ಯಾಯಾಮಗಳು ಕ್ಯಾನ್ಸರ್ ಹೊರತುಪಡಿಸಿ ಇತರ ಅನಾರೋಗ್ಯ ಕಾರಣಗಳಿಂದ ಉಂಟಾಗಬಹುದಾದ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತವೆ. ಭಾರ ಎತ್ತುವವರಲ್ಲಿ ಹಠಾತ್ ಸಾವಿನ ಅಪಾಯವು ಶೇ 9-22 ರಷ್ಟು ಮತ್ತು ಏರೋಬಿಕ್ ವ್ಯಾಯಾಮ ಮಾಡುವವರಲ್ಲಿ ಇದು ಶೇ 24-34 ರಷ್ಟು ಕಡಿಮೆಯಾಗಿದೆ.

ಭಾರ ಎತ್ತಿ.. ದೀರ್ಘಾಯುಷಿಗಳಾಗಿ: ಸಂಶೋಧನೆಯಲ್ಲಿ ಬಹಿರಂಗ
lift-weights-to-live-longer-research-reveals

By

Published : Oct 3, 2022, 1:01 PM IST

ಓಟ ಮತ್ತು ಸೈಕ್ಲಿಂಗ್‌ನಂಥ ಏರೋಬಿಕ್ ವ್ಯಾಯಾಮಗಳು ನಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂಬುದು ಈಗಾಗಲೇ ಸಂಶೋಧನೆಗಳಿಂದ ತಿಳಿದಿದೆ. ಆದರೆ ತೂಕವನ್ನು ಎತ್ತುವುದರಿಂದ ದೀರ್ಘಾಯುಷಿಗಳಾಗಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಇತ್ತೀಚಿನ ಅಧ್ಯಯನವೊಂದು ಇದನ್ನು ದೃಢಪಡಿಸಿದೆ.

ಈ ಸಂಶೋಧನೆಯ ಭಾಗವಾಗಿ, ವಿಜ್ಞಾನಿಗಳು ಸರಾಸರಿ 71 ವರ್ಷ ವಯಸ್ಸಿನ ಒಂದು ಲಕ್ಷ ಜನರ ಡೇಟಾವನ್ನು ಅಧ್ಯಯನ ಮಾಡಿದ್ದರು. ಅಲ್ಲದೆ ಇವರ ಸರಾಸರಿ ಒಟ್ಟು ದೇಹದ ಎತ್ತರ-ತೂಕ ಅನುಪಾತ (BMI) 27.8 (ಬೊಜ್ಜು) ಆಗಿತ್ತು. ಸುಮಾರು ಒಂದು ದಶಕದ ನಂತರ ಅವರನ್ನು ಮತ್ತೆ ಪರೀಕ್ಷಿಸಲಾಯಿತು. ಅವರು ಹೃದ್ರೋಗದಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಇನ್ನಾವುದೇ ಕಾರಣದಿಂದ ಸಾವನ್ನಪ್ಪಿದ್ದಾರೆಯೇ ಎಂಬುದನ್ನು ವಿಶ್ಲೇಷಿಸಲಾಯಿತು. ಈ ಅಧ್ಯಯನದಲ್ಲಿ ಬಹಿರಂಗವಾದ ವಿಷಯಗಳು ಇಲ್ಲಿವೆ.

  • ಸಂಶೋಧನೆಯಲ್ಲಿ ಅಧ್ಯಯನಕ್ಕೆ ಒಳಪಡಿಸಲಾದ ಒಟ್ಟು ಜನರಲ್ಲಿ ಶೇ 23 ರಷ್ಟು ಜನ ಹೆಚ್ಚಾಗಿ ಭಾರ ಎತ್ತುವ ವ್ಯಾಯಾಮ ಮಾಡುತ್ತಿದ್ದರು. ಇವರಲ್ಲಿ ಶೇ 16 ರಷ್ಟು ಜನ ಈ ವ್ಯಾಯಾಮವನ್ನು ವಾರಕ್ಕೆ ಒಂದರಿಂದ ಆರು ಬಾರಿ ಮಾಡಿದ್ದಾರೆ. 32 ರಷ್ಟು ಜನರು ಶಿಫಾರಸು ಮಾಡಿದ ಮಟ್ಟದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಏರೋಬಿಕ್ ವ್ಯಾಯಾಮ ಮಾಡಿದ್ದರು.
  • ಭಾರ ಎತ್ತುವುದು ಮತ್ತು ಏರೋಬಿಕ್ ವ್ಯಾಯಾಮಗಳು ಕ್ಯಾನ್ಸರ್ ಹೊರತುಪಡಿಸಿ ಇತರ ಅನಾರೋಗ್ಯ ಕಾರಣಗಳಿಂದ ಉಂಟಾಗಬಹುದಾದ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತವೆ.
  • ಭಾರ ಎತ್ತುವವರಲ್ಲಿ ಹಠಾತ್ ಸಾವಿನ ಅಪಾಯವು ಶೇ 9-22 ರಷ್ಟು ಮತ್ತು ಏರೋಬಿಕ್ ವ್ಯಾಯಾಮ ಮಾಡುವವರಲ್ಲಿ ಇದು ಶೇ 24-34 ರಷ್ಟು ಕಡಿಮೆಯಾಗಿದೆ.
  • ಏರೋಬಿಕ್ ವ್ಯಾಯಾಮ ಮತ್ತು ಭಾರ ಎತ್ತುವಿಕೆ ಎರಡೂ ವ್ಯಾಯಾಮ ಮಾಡಿದವರಿಗೆ ಹಲವಾರು ಪ್ರಯೋಜನಗಳಾಗಿದ್ದವು. ಉದಾಹರಣೆಗೆ, ವಾರದಲ್ಲಿ ಒಂದು ಅಥವಾ ಎರಡು ಬಾರಿ ಭಾರ ಎತ್ತುವುದು ಮತ್ತು ಕನಿಷ್ಠ ನಿಗದಿತ ಮಟ್ಟದ ಏರೋಬಿಕ್ ವ್ಯಾಯಾಮವನ್ನು ಮಾಡುವುದರಿಂದ ಅಪಾಯವು ಶೇ 41 ರಿಂದ 47 ರಷ್ಟು ಕಡಿಮೆಯಾಗಿದೆ.
  • ಭಾರ ಎತ್ತುವುದರಿಂದ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಿದೆ.

ಇದನ್ನೂ ಓದಿ: ಕೊಪ್ಪಳ: 50 ಕೆಜಿ ಭಾರ ಎತ್ತಿದ 11 ವರ್ಷದ ಅವಳಿ ಸಹೋದರರು!

ABOUT THE AUTHOR

...view details