ಜಮ್ಮು:ಭಾರಿ ಮಳೆಯಿಂದ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯ ಹಲವೆಡೆ ಭೂಕುಸಿತವಾಗಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಬೆಂಗಾವಲು ಪಡೆ ವಾಹನಗಳೂ ಸೇರಿದಂತೆ ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ತೀವ್ರ ಹಾನಿಗೀಡಾದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾಗಿದೆ. ರಾಂಬನ್ ಜಿಲ್ಲೆಯಲ್ಲಿ ಈ ಹೆದ್ದಾರಿಯ ನಾಲ್ಕು ಸ್ಥಳಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಉರುಳಿಬಿದ್ದಿವೆ. ಭೂಕುಸಿತಕ್ಕೆ ರಸ್ತೆ ಹಾನಿಯಾಗಿದೆ.