ಕರ್ನಾಟಕ

karnataka

ETV Bharat / bharat

10ನೇ ಬಾರಿ ಮೌಂಟ್​ ಎವರೆಸ್ಟ್​ ಏರಿ, ತನ್ನದೇ ದಾಖಲೆ ಸರಿಗಟ್ಟಿದ ಲಕ್ಪಾ ಶೆರ್ಪಾ!

ಯಶಸ್ವಿ ಪರ್ವತಾರೋಹಿ ಆಗಿರುವ ಲಕ್ಪಾ ಶೆರ್ಪಾ 10ನೇ ಬಾರಿಗೆ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ್ದು, ತಮ್ಮ ದಾಖಲೆಯನ್ನು ತಾವೇ ಸರಿಗಟ್ಟಿದ್ದಾರೆ.

Sherpa woman climbs Everest for 10th time, breaks own record
10ನೇ ಬಾರಿ ಮೌಂಟ್​ ಎವರೆಸ್ಟ್​ ಏರಿ, ತನ್ನದೇ ದಾಖಲೆ ಸರಿಗಟ್ಟಿದ ಲಕ್ಪಾ ಶೆರ್ಪಾ

By

Published : May 13, 2022, 10:30 AM IST

ಕಠ್ಮಂಡು(ನೇಪಾಳ):ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಒಂದು ಬಾರಿ ಹತ್ತುವುದೇ ಮಹತ್ಸಾಧನೆ. ಆದರೆ ಇಲ್ಲೊಬ್ಬ ಪರ್ವತಾರೋಹಿ ಮಹಿಳೆ 10ನೇ ಬಾರಿ ಹತ್ತುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದರು. ಯಶಸ್ವಿ ಪರ್ವತಾರೋಹಿ ಆಗಿರುವ ಲಕ್ಪಾ ಶೆರ್ಪಾ ಈ ದಾಖಲೆ ಬರೆದಿದ್ದು, ಗುರುವಾರ ಮುಂಜಾನೆ ಮೌಂಟ್​ ಎವರೆಸ್ಟ್ ಹತ್ತಿದ್ದಾರೆ.

ಲಕ್ಪಾ ಶೆರ್ಪಾ ಮತ್ತು ಇತರ ಹಲವು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಹತ್ತಿದ್ದು, ಪರ್ವತಾರೋಹಣಕ್ಕೆ ಅನುಕೂಲಕರ ವಾತಾವರಣವಿತ್ತು. ಲಕ್ಪಾ ಶೆರ್ಪಾ ಆರೋಗ್ಯವಾಗಿದ್ದು, ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಾರೆ ಎಂದು ಲಕ್ಪಾ ಶೆರ್ಪಾ ಅವರ ಸಹೋದರ ಮತ್ತು ಪರ್ವತಾರೋಹಣ ಸಂಘಟಕ ಮಿಂಗ್ಮಾ ಗೆಲು ಸ್ಪಷ್ಟನೆ ನೀಡಿದ್ದಾರೆ.

ನೇಪಾಳ ಮೂಲದ 48 ವರ್ಷದ ಲಕ್ಪಾ ಶೆರ್ಪಾ ಅವರು ಎಲ್ಲಿಯೂ ಶಿಕ್ಷಣ ಪಡೆಯಲಿಲ್ಲ. ಅವರು ಅಲ್ಲಿಗೆ ಬರುವ ಚಾರಣಿಗರಿಗೆ ಉಪಯುಕ್ತ ವಸ್ತುಗಳನ್ನು ನೀಡುವ ಮೂಲಕ ಅವರು ಜೀವನ ಸಾಗಿಸುತ್ತಿದ್ದರು. ಈಗ ಅದೇ ಲಕ್ಪಾ ಶೆರ್ಪಾ 10ನೇ ಬಾರಿ ಪರ್ವತಾರೋಹಣವನ್ನು ಯಶಸ್ವಿಗೊಳಿಸಿದ್ದಾರೆ.

ಈಗ ಅವರು ತನ್ನ ಮೂವರು ಮಕ್ಕಳೊಂದಿಗೆ ಅಮೆರಿಕದಲ್ಲಿ ವಾಸ ಮಾಡುತ್ತಿದ್ದಾರೆ. ನೂರಾರು ವಿದೇಶಿ ಪರ್ವತಾರೋಹಿಗಳು ಮೇ ತಿಂಗಳಲ್ಲಿ ಎವರೆಸ್ಟ್ ಏರಲು ಪ್ರಯತ್ನಿಸುತ್ತಾರೆ. ಏಕೆಂದರೆ ಈ ತಿಂಗಳು ಹಿಮಾಲಯವನ್ನು ಏರಲು ಉತ್ತಮ ವಾತಾವರಣವನ್ನು ಹೊಂದಿರುತ್ತವೆ.

ಇದನ್ನೂ ಓದಿ:ಅಸಾನಿ ಚಂಡಮಾರುತಕ್ಕೆ 1 ಕೋಟಿಗೂ ಹೆಚ್ಚು 'ಆಲಿವ್ ರಿಡ್ಲೆ' ಕಡಲಾಮೆ ಮೊಟ್ಟೆಗಳು ನಾಶ

ABOUT THE AUTHOR

...view details