ಕರ್ನಾಟಕ

karnataka

ETV Bharat / bharat

ಜಾತಿ ನಿಂದನೆ: ಕಾಲಿವುಡ್​ ನಟಿ ಮೀರಾ ಮಿಥುನ್​ ವಿರುದ್ಧ ದೂರು ದಾಖಲು - ಕಾಲಿವುಡ್​ ನಟಿ ಮೀರಾ ಮಿಥುನ್​

ಜಾತಿ ನಿಂದನೆ ಆರೋಪದ ಮೇಲೆ ಕಾಲಿವುಡ್ ನಟಿ ಮೀರಾ ಮಿಥುನ್​ ವಿರುದ್ಧ ಇದೀಗ ದೂರು ದಾಖಲಾಗಿದ್ದು, ಸಂಕಷ್ಟ ಎದುರಾಗಿದೆ.

Meera Mithun
Meera Mithun

By

Published : Aug 9, 2021, 10:41 PM IST

ಚೆನ್ನೈ:ಖಾಸಗಿ ರಿಯಾಲಿಟಿ ಶೋ ಹಾಗೂ ಅನೇಕ ಕಾಲಿವುಡ್​ ಚಿತ್ರಗಳಲ್ಲಿ ನಟನೆ ಮಾಡಿರುವ ಪ್ರಸಿದ್ಧ ನಟಿ ಮೀರಾ ಮಿಥುನ್​ ವಿರುದ್ಧ ಇದೀಗ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಅವರ ಮೇಲೆ ಕೇಳಿ ಬಂದಿದೆ.

ನಟಿ ಮೀರಾ ಮಿಥುನ್​ ವಿರುದ್ಧ ದೂರು ದಾಖಲು

ಕೆಲವು ದಿನಗಳ ಹಿಂದೆ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಡಿಯೋ ರಿಲೀಸ್​ ಆಗಿತ್ತು. ಅದರಲ್ಲಿ ದಲಿತ ಸಮುದಾಯದ ಸದಸ್ಯರು ಚಲನಚಿತ್ರ ಉದ್ಯಮ ತೊರೆಯುವಂತೆ ಒತ್ತಾಯಿಸುವ ವಿಡಿಯೋ ಇದಾಗಿತ್ತು. ಇದರಲ್ಲಿ ನಟಿ ಮೀರಾ ಮಿಥುನ್​ ಮಾತನಾಡಿದ್ದರು. ಇದಾದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿರಿ: ಖ್ಯಾತ ಮಲಯಾಳಂ ನಟಿ ಶರಣ್ಯ ಶಶಿ ನಿಧನ

ಇದರ ವಿರುದ್ಧ ಪ್ರತಿಭಟನೆ ಸಹ ನಡೆದಿದ್ದವು. ಅನೇಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಮೀರಾ ವಿರುದ್ಧ ಸೆಕ್ಷನ್​ 7ರ ಅಡಿ ದೂರು ದಾಖಲು ಮಾಡಲಾಗಿದೆ. ವಿದುತಲೈ ಸಿರುತ್ತೈಕಲ್​​ ಕಚ್ಚಿ ಪರವಾಗಿ ವನ್ನಿಯರಸು ದೂರು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಈ ಪ್ರಕರಣ ದಾಖಲಾಗಿದೆ. ಮೀರಾ ಮಿಥುನ್​ ಠಾಣಾ ಸೇರ್ಣ ಕೂಟಂ ಮತ್ತು 8 ತೊಟ್ಟಕಲ್​ ಚಿತ್ರ ಸೇರಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ABOUT THE AUTHOR

...view details