ಕೋಲ್ಕತ್ತಾ: ಪ್ರಗತಿಯಲ್ಲಿರುವ ಮೆಟ್ರೋ ಕಾಮಗಾರಿಯಿಂದ ನಗರದ ಬೋ ಬಜಾರ್ ಬಳಿಯ ಕೆಲ ಕಟ್ಟಡಗಳಲ್ಲಿ ಇಂದು ಬೆಳಿಗ್ಗೆ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಉಂಟಾಗಿದೆ. ಆದ್ದರಿಂದ ತಕ್ಷಣವೇ 10 ಕಟ್ಟಡಗಳ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡ ತಕ್ಷಣವೇ ನಿವಾಸಿಗಳು ಕೆಲ ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಮೆಟ್ರೋ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.