ಕರ್ನಾಟಕ

karnataka

ETV Bharat / bharat

ರಕ್ಷಾ ಬಂಧನ.. ಪ್ರಧಾನಿ ಮೋದಿಗೆ ದೇಶದಲ್ಲಷ್ಟೇ ಅಲ್ಲ, ಪಾಕ್​​​ನಲ್ಲೂ ಸಹೋದರಿ ಇದ್ದಾರೆ.. ಯಾರವರು? - Rakshabandhan festival

ಹೌದು ಪ್ರಧಾನಿಗೆ ಭಾರತದಲ್ಲಿ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಸಹೋದರಿ ಇದ್ದಾರೆ. ಪ್ರಧಾನಿ ಮೋದಿಯವರ ಪಾಕಿಸ್ತಾನಿ ಸಹೋದರಿ ಕಮರ್ ಜಹಾನ್ ಈ ವರ್ಷವೂ ರಾಖಿ ಕಟ್ಟಲು ದೆಹಲಿಗೆ ಆಗಮಿಸಲಿದ್ದಾರೆ.

Know about the Pakistani sister who ties Rakhi to PM Modi on every Rakshabandhan festival
ರಕ್ಷಾ ಬಂಧನ.. ಪ್ರಧಾನಿ ಮೋದಿಗೆ ದೇಶದಲ್ಲಷ್ಟೇ ಅಲ್ಲ, ಪಾಕ್​​​ನಲ್ಲೂ ಸಹೋದರಿ ಇದ್ದಾರೆ.. ಯಾರವರು?

By ETV Bharat Karnataka Team

Published : Aug 22, 2023, 7:27 AM IST

ಅಹಮದಾಬಾದ್​:ರಕ್ಷಾ ಬಂಧನ.. ಇದು ಭಾರತೀಯ ಸಂಪ್ರದಾಯದಲ್ಲಿ ಭಾರಿ ಮಹತ್ವ ಇದೆ. ಅಣ್ಣ- ತಂಗಿ, ಅಕ್ಕ - ತಮ್ಮಂದಿರ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಚರಣೆ ಇದು. ಅಂದ ಹಾಗೆ ರಕ್ಷಾ ಬಂಧನ ಬಂದರೆ, ಪ್ರಧಾನಿ ಮೋದಿ ಕೈಯಲ್ಲಿ ರಾಖಿಗಳು ರಾರಾಜಿಸುತ್ತವೆ. ಸಾವಿರಾರು ಸಹೋದರಿಯರು, ಅಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಅದೇನು ವಿಶೇಷ ಅಲ್ಲ ಬಿಡಿ, ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿ ವರ್ಷ ರಾಖಿ ಕಟ್ಟುವ ಪಾಕಿಸ್ತಾನಿ ಸಹೋದರಿಯೂ ಇದ್ದಾರೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಹೌದು ಇದು ಅಚ್ಚರಿಯಾದರೂ ಸತ್ಯ. ಪ್ರಧಾನಿ ಮೋದಿಯವರ ಪಾಕಿಸ್ತಾನಿ ಸಹೋದರಿ ಖಮರ್ ಜಹಾನ್ ಈ ವರ್ಷವೂ ರಾಖಿ ಕಟ್ಟಲು ದೆಹಲಿಗೆ ಆಗಮಿಸುತ್ತಿದ್ದಾರೆ.

ವಾಸಂತಿ ಅವರು ಪಿಎಂ ಮೋದಿ ಅವರ ಸಹೋದರಿ. ಇನ್ನು ಪಾಕಿಸ್ತಾನದ ಈ ಸಹೋದರಿ ಕೂಡ ಅಷ್ಟೇ ಫೇಮಸ್. ಪ್ರಧಾನಿ ಮೋದಿಯವರ ಪಾಕಿಸ್ತಾನಿ ಸಹೋದರಿ ಖಮರ್ ಜಹಾನ್ ಈ ವರ್ಷವೂ ರಾಖಿ ಕಟ್ಟಲು ದೆಹಲಿಗೆ ಬರುತ್ತಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಪ್ರಧಾನಿ ಮೋದಿಗೆ ತಮ್ಮ ಕೈಯಿಂದಲೇ ಇವರು ರಾಖಿ ಕಟ್ಟುತ್ತಿದ್ದಾರೆ. ಅಂದ ಹಾಗೆ ಈ ಸಹೋದರಿ ಅಹಮದಾಬಾದ್​​ನವರನ್ನ ಮದುವೆ ಆಗಿದ್ದಾರೆ. ಈಗ ತೇಲಾವ್​ನಲ್ಲಿ ಇವರು ವಾಸಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಖಮರ್​ ಜಹಾನಾ, ’’ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು 35 ವರ್ಷಗಳಿಂದ ಬಲ್ಲೆ. ಡಾ.ಸ್ವರೂಪ್ ಸಿಂಗ್ ಗುಜರಾತಿನ ರಾಜ್ಯಪಾಲರಾಗಿದ್ದರು. ಆ ಸಮಯದಲ್ಲಿ ರಾಜ್ಯಪಾಲರು ನನ್ನನ್ನು ಅವರ ಮಗಳನ್ನಾಗಿ ಮಾಡಿಕೊಂಡಿದ್ದರು. ಗುಜರಾತಿನ ರಾಜ್ಯಪಾಲರ ಅವಧಿ ಮುಗಿದು ಗುಜರಾತದಿಂದ ಹೊರಡುವಾಗ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದೆವು. ಆಗ ನರೇಂದ್ರ ಮೋದಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯಪಾಲರ ಜತೆ ಕುಳಿತಿದ್ದು, ಆಕೆ ನನ್ನ ಮಗಳು, ಈಗ ನಾನು ನಿಮಗೆ ಒಪ್ಪಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದರು. ಅಂದಿನಿಂದ ನರೇಂದ್ರ ಮೋದಿಯವರು ನನ್ನನ್ನು ಸಹೋದರಿ ಎಂದು ಕರೆಯುತ್ತಾರೆ. ಅಂದಿನಿಂದ ಪ್ರತಿ ವರ್ಷ ನಾನು ನರೇಂದ್ರ ಮೋದಿ ಅವರಿಗೆ ನನ್ನ ಕೈಯಿಂದ ಮಾಡಿದ ರಾಖಿಯನ್ನು ಕಟ್ಟುತ್ತೇನೆ’’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರು ಈಗ ದೇಶದ ಪ್ರಧಾನಿಯಾಗಿದ್ದಾರೆ. ವಿಶ್ವದ ಅತ್ಯಂತ ಜನಪ್ರಿಯ ನಾಯಕರೂ ಆಗಿ ರೂಪುಗೊಂಡಿದ್ದಾರೆ. ಆ ಬಗ್ಗೆ ತಮಗೆ ತುಂಬಾ ಹೆಮ್ಮೆಯಿದೆ ಎಂದು ಜಹಾನ್​ ಖುಷಿಯಿಂದ ಹೇಳಿಕೊಂಡಿದ್ದಾರೆ. ಆದರೆ, ನರೇಂದ್ರ ಮೋದಿ ಅವರು ಸರಳ ಕಾರ್ಯಕರ್ತರಾಗಿದ್ದಾಗಿನಿಂದಲೂ ನನಗೆ ಗೊತ್ತು. ಒಬ್ಬ ಸಣ್ಣ ಕೆಲಸಗಾರನಿಂದ ಹಿಡಿದು ಪ್ರಧಾನಿಯವರೆಗೆ ಎಷ್ಟು ಹೋರಾಟ ಮಾಡಬೇಕಾಗಿತ್ತು ಎಂಬುದು ನನಗೂ ಚೆನ್ನಾಗಿ ಗೊತ್ತು. ನಾನು ಪ್ರತಿ ವರ್ಷ ನರೇಂದ್ರ ಮೋದಿ ಜಿ ಅವರಿಗೆ ರಾಖಿ ಕಟ್ಟುತ್ತೇನೆ ಮತ್ತು ಈ ಬಾರಿಯೂ ನಾನು ದೆಹಲಿಗೆ ಹೋಗಿ ಕೈಯಿಂದ ಮಾಡಿದ ರಾಖಿಯನ್ನು ಕಟ್ಟುತ್ತೇನೆ ಎಂದು ಖಮರ್​ ಜಹಾನ್​ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ವಿಶೇಷ ಎಂದರೆ ಪ್ರಧಾನಿ ಮೋದಿ ಕೈಯಿಂದಲೇ ತಯಾರಿಸಿದ ರಾಖಿಗಳನ್ನು ಇಷ್ಟ ಪಡುತ್ತಾರಂತೆ. ಹೀಗಾಗಿಯೇ ಖಮರ್ ಜಹಾನ್ ಪ್ರತಿ ವರ್ಷ ತನ್ನ ಸಹೋದರ ನರೇಂದ್ರ ಮೋದಿಗೆ ಕೈಯಿಂದ ಹೆಣೆದ ರಾಖಿಗಳನ್ನು ನೇಯುತ್ತಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅವರೇ ಹೋಗಿ ರಾಖಿ ಕಟ್ಟುತ್ತಿದ್ದರು. ಈಗ ದೇಶದ ಪ್ರಧಾನಿಯಾದ ನಂತರವೂ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಕೈಯಿಂದಲೇ ರಾಖಿ ಕಟ್ಟುತ್ತಾರೆ. ಈ ನಡುವೆ ಕೊರೊನಾ ಅವಧಿಯಲ್ಲಿ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ, ಆದರೆ ಇಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸಿ, ಬಾಂಧವ್ಯವನ್ನು ಮೆರೆದಿದ್ದರು ಜಹಾನ್​.

ಮೋದಿ ಮತ್ತು ಕಮರ್ ಜಹಾನ್​​ ಅವರೊಂದಿಗೆ ಕುಟುಂಬ ಸಂಬಂಧಗಳನ್ನು ಹೊಂದಿದ್ದಾರೆ. ’’ನನ್ನ ಮಗ ಕೆನಡಾದಲ್ಲಿ ಓದಿದ್ದು, ಈಗ ಉದ್ಯಮಿಯಾಗಿದ್ದಾನೆ. ಪ್ರಧಾನಿಯವರು ನನ್ನ ಮಗನನ್ನು ಪ್ರಿನ್ಸ್ ಎಂದು ಸಂಭೋದಿಸಿ ಆಗಾಗ ಸಲಹೆ ಕೊಡುತ್ತಾರೆ. ನನ್ನ ಪತಿ ಪೇಂಟರ್ ಆಗಿರುವುದರಿಂದ ಕಲೆಯ ಬಗ್ಗೆಯೂ ಪ್ರಧಾನಿ ಕೆಲವೊಮ್ಮೆ ಸಲಹೆಗಳನ್ನು ನೀಡುತ್ತಾರೆ‘‘ ಎನ್ನುವ ಮೂಲಕ ಪ್ರಧಾನಿ ಹಾಗೂ ತಮ್ಮ ಬಾಂಧವ್ಯ ಎಂತಹದ್ದು ಎಂದು ಜಹಾನ್​ ವಿವರಿಸಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿರುವ ಕಮರ್ ಜಹಾನ್ ಅವರ ಪತಿ ಮೊಹ್ಸಿನ್ ಶೇಖ್, ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಪರಿಶ್ರಮದಿಂದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಚಿಕ್ಕ ಊರಿನ ವ್ಯಕ್ತಿಯೊಬ್ಬ ಇಂದು ದೇಶವನ್ನು ಮುನ್ನಡೆಸುತ್ತಿದ್ದಾನೆ. ಇದು ನಿಜವಾಗಿಯೂ ಹೆಮ್ಮೆಪಡುವಂತ ಸಂಗತಿ ಎಂದು ಮೋದಿ ಅವರ ಗುಣಗಾನ ಮಾಡಿದ್ದಾರೆ.

ಇದನ್ನು ಓದಿ:ಶಿವನ ದೇವಸ್ಥಾನದಲ್ಲಿ ಇಟಲಿ ವಧು ವರಿಸಿದ ಯುವಕ.. ಹಿಂದೂ ಸಂಪ್ರದಾಯದಂತೆ ನಡೆಯಿತು ವಿವಾಹ

ABOUT THE AUTHOR

...view details