ಕರ್ನಾಟಕ

karnataka

ETV Bharat / bharat

ಕೋವಿಡ್​ಗೆ ಮಧ್ಯಪ್ರದೇಶ ಬಿಜೆಪಿ ಸಂಸದ ನಂದಕುಮಾರ್​ ಚೌಹಾಣ್​ ಬಲಿ: ಸಿಎಂ, ಪಿಎಂ ಸಂತಾಪ - Nandkumar Singh Chauhan

ಮಧ್ಯಪ್ರದೇಶದ ಖಂಡ್ವಾ ಕ್ಷೇತ್ರದ ಸಂಸದ ನಂದಕುಮಾರ್​ ಸಿಂಗ್ ಚೌಹಾಣ್ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Nandkumar Singh Chauhan
ನಂದಕುಮಾರ್​ ಚೌಹಾಣ್​

By

Published : Mar 2, 2021, 9:54 AM IST

Updated : Mar 2, 2021, 10:21 AM IST

ಖಂಡ್ವಾ (ಮಧ್ಯಪ್ರದೇಶ):ಕೊರೊನಾ ಸೋಂಕು ತಗುಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯಪ್ರದೇಶದ ಖಂಡ್ವಾ ಕ್ಷೇತ್ರದ ಬಿಜೆಪಿ ಸಂಸದ ನಂದಕುಮಾರ್​ ಸಿಂಗ್ ಚೌಹಾಣ್ ಇಂದು ಕೊನೆಯುಸಿರೆಳೆದಿದ್ದಾರೆ.

ಜನವರಿ 11 ರಂದು ನಂದಕುಮಾರ್ ಅವರ ಕೋವಿಡ್​ ವರದಿ ಪಾಸಿಟಿವ್​ ಬಂದಿತ್ತು. ಭೋಪಾಲ್‌ನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ದೆಹಲಿಯ ಏಮ್ಸ್​ಗೆ ಶಿಫ್ಟ್​ ಮಾಡಲಾಗಿತ್ತು. ಆದರೆ ನಂದಕುಮಾರ್ ವಿಧಿವಶರಾಗಿರುವುದಾಗಿ ಅವರ ಪುತ್ರ ಹರ್ಷವರ್ಧನ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಿಂದ ರೈತನ ಗುಂಡಿಕ್ಕಿ ಹತ್ಯೆ

2014 ಹಾಗೂ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಖಂಡ್ವಾ ಕ್ಷೇತ್ರದಿಂದ ಸ್ಫರ್ಧಿಸಿ ಎರಡೂ ಬಾರಿ ಜಯಭೇರಿ ಬಾರಿಸಿದ್ದರು.

ಶಿವರಾಜ್​ ಸಿಂಗ್​ ಚೌಹಾಣ್ ಟ್ವೀಟ್​

ಸಿಎಂ, ಪಿಎಂ​ ಸಂತಾಪ

ಸಂಸದರ ಅಗಲಿಕೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಜನಪ್ರೀಯ ನಾಯಕ ನಮ್ಮನ್ನು ಬಿಟ್ಟು ಹೋಗಿರುವುದು ದುಃಖ ತಂದಿದೆ. ಪಕ್ಷ ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡಿದೆ, ಸಂಘಟಕರಾಗಿದ್ದ ಅಂತಹ ನಾಯಕ ಇನ್ನಿಲ್ಲವಾಗಿದೆ ಎಂದು ಶಿವರಾಜ್​ ಸಿಂಗ್​ ಚೌಹಾಣ್ ದುಃಖ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದಾದ್ಯಂತ ಬಿಜೆಪಿಯನ್ನು ಬಲಪಡಿಸುವಲ್ಲಿ ನಂದಕುಮಾರ್ರ​ ಕೊಡುಗೆಗಾಗಿ ಎಂದಿಗೂ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಪಿಎಂ ಮೋದಿ ಟ್ವೀಟ್​ ಮಾಡಿದ್ದಾರೆ.

Last Updated : Mar 2, 2021, 10:21 AM IST

ABOUT THE AUTHOR

...view details