ಹೈದರಾಬಾದ್: ಸೋಲೆ ಗೆಲುವಿನ ಮೆಟ್ಟಿಲು. ಸೋತೆನೆಂದು ಕುಗ್ಗಿ ಇಟ್ಟು ಗುರಿಯಿಂದ ಹಿಂದೆ ಸರಿಯದೇ ಸತತ ಪ್ರಯತ್ನದಿಂದ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನೋದನ್ನು ಸಾಧನೆ ಮೂಲಕ ತೋರಿಸಿದ್ದಾರೆ ಕೇರಳದ ಯುವಕ. ಹೌದು, ಬರೋಬ್ಬರಿ ಆರು ಸಲ ವಿಫಲವಾದರೂ ಏಳನೇ ಬಾರಿ ಅಂದುಕೊಂಡ ಗುರಿ ಸಾಧಿಸುವ ಐಪಿಎಸ್ ಅಧಿಕಾರಿಯಾದ ಕೇರಳ ಯುವಕನ ಯಶೋಗಾಥೆ ಇತರರಿಗೆ ಸ್ಫೂರ್ತಿದಾಯಕ ಕಥೆಯಾಗಿದೆ.
ಕೇರಳದ ತ್ರಿಸೂರ್ನಲ್ಲಿ ಜನಿಸಿದ ಶೆಹನ್ಶಾಹ್, ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗದಲ್ಲಿ ಬಿಟೆಕ್ ಪದವಿ ಪಡೆದಿದ್ದರು. ಇದಾದ ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಅಥ್ಲೇಟಿಕ್ಸ್ನಲ್ಲಿ ತರಬೇತಿ ಪಡೆತ ಇವರು 8 ವರ್ಷದಲ್ಲಿ 30 ರಾಜ್ಯ ಮತ್ತು 14 ರಾಷ್ಟ್ರ ಮಟ್ಟದ ಪದಕಗಳನ್ನು ಪಡೆದಿದ್ದರು. ಇದಾದ ಬಳಿಕ ಸಿಐಎಸ್ಎಫ್ನಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಲು ಬಳಿಕ ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆಯಲ್ಲಿ (IRPFS) ವಿಭಾಗೀಯ ಭದ್ರತಾ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಐಆರ್ಪಿಎಫ್ಎಸ್ನಲ್ಲಿ ಇಂಡೋರ್ ಮತ್ತು ಔಟ್ಡೋರ್ನಲ್ಲಿ ಉತ್ತಮ ಅಭ್ಯರ್ಥಿಯಾದರು. ಅಷ್ಟೇ ಅಲ್ಲದೇ, ಐಆರ್ಪಿಎಫ್ಎಸ್ ತರಬೇತಿಯಲ್ಲಿ 48ನೇ ಬ್ಯಾಚ್ನ ಉತ್ತಮ ಸಾಧನೆ ತೋರಿದರು. .
ಕನಸಿನತ್ತ ತುಡಿಯುತ್ತಿದ್ದ ಮನಸು: ಸರ್ಕಾರಿ ಕೆಲಸ ಪಡೆದು, ಇಷ್ಟೆಲ್ಲಾ ಸಾಧನೆ ಮಾಡಿದ ಬಳಿಕವೂ ತಾವು ಐಪಿಎಸ್ ಆಗಬೇಕು ಎಂಬ ಕನಸು ಮಾತ್ರ ಶೆಹನ್ಶಾಹ್ ಅವರನ್ನು ಕಾಡುತ್ತಲೇ ಇತ್ತು. ಇದಕ್ಕೆ ಕಾರಣ ಅವರ ಅಜ್ಜ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅಜ್ಜನನ್ನು ನೋಡಿ ಸ್ಪೂರ್ತಿಗೊಂಡಿದ್ದ ಶೆಹನ್ಶಾನ್, ಬಾಲ್ಯದಲ್ಲೇ ಐಪಿಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದರು. ಇದೇ ಕಾರಣಕ್ಕೆ ಅವರು ಹೈದರಾಬಾದ್, ಲಕ್ನೋನಲ್ಲಿ ಸಿಐಎಸ್ಎಫ್ ಮಾಡುತ್ತಿದ್ದರೂ, ಯುಪಿಎಸ್ಸಿಗೆ ತಯಾರಿ ಮಾತ್ರ ನಿಲ್ಲಿಸಿರಲಿಲ್ಲ. ಆರಂಭದಲ್ಲಿ ದಿನಕ್ಕೆ 10-12 ಗಂಟೆ ಓದುತ್ತಿದ್ದ ಶೆಹನ್ಶಾಹ್, ಬಳಿಕ ಸಿಐಎಸ್ಎಫ್ ಕೆಲಸದಿಂದ ದಿನಕ್ಕೆ 4 ರಿಂದ 6 ಗಂಟೆ ಅಭ್ಯಾಸಕ್ಕೆ ಮುಂದಾದರು. ಆರು ಬಾರಿ ಮುಖ್ಯ ಪರೀಕ್ಷೆ ಬರೆದ ಇವರು ನಾಲ್ಕು ಬಾರಿ ಸಂದರ್ಶನದಲ್ಲಿ ಸಫಲವಾಗಲಿಲ್ಲ. ಹಾಗೆಂದ ಮಾತ್ರಕ್ಕೆ ಇವರು ಪ್ರಯತ್ನವನ್ನು ಕೈ ಬಿಡಲಿಲ್ಲ. ಮತ್ತೆ, ಮತ್ತೆ ಪ್ರಯತ್ನಿಸಿ, ಕಡೆಗೆ ಏಳನೇ ಪ್ರಯತ್ನದಲ್ಲಿ ಅಂದುಕೊಂಡ ಗುರಿ ಸಾಧಿಸಿದರು.