ಕೊಚ್ಚಿ:ಕೇರಳದ ಯಹೂದಿ ಸಮುದಾಯವು 15 ವರ್ಷಗಳ ನಂತರ ಯಹೂದಿ ಸಂಪ್ರದಾಯಗಳ ಸಾರವನ್ನು ಎತ್ತಿ ಹಿಡಿಯುವ ಮೂಲಕ ಸಾಂಪ್ರದಾಯಿಕ ವಿವಾಹವನ್ನು ನೆರವೇರಿಸಿತು. ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು.
ಅಮೆರಿಕದಲ್ಲಿ ಡೇಟಾ ಸೈಂಟಿಸ್ಟ್ ಆಗಿರುವ ರಾಚೆಲ್ ಮಲಾಖೈ ಮತ್ತು ಮಾಜಿ ಅಪರಾಧ ವಿಭಾಗದ ಎಸ್.ಪಿ.ಬೆನೊಯ್ ಮಲಾಖೈ ಅವರ ಮಗಳು ಅಮೆರಿಕದ ಪ್ರಜೆ ಮತ್ತು ನಾಸಾ ಎಂಜಿನಿಯರ್ ರಿಚರ್ಡ್ ಜಕಾರಿ ರೋವ್ ಅವರನ್ನು ವಿವಾಹವಾದರು. ಇಸ್ರೇಲ್‌ನಿಂದ ರಾಜ್ಯಕ್ಕೆ ಆಗಮಿಸಿದ ರಬ್ಬಿ (ಆಧ್ಯಾತ್ಮಿಕ ನಾಯಕ)ಯೊಬ್ಬರು ವಿವಾಹ ನೆರವೇರಿಸಿದರು.
ಮದುವೆ ಸಮಾರಂಭವು ಹುಪ್ಪಾ ಎಂಬಲ್ಲಿ ನಡೆಯಿತು. ಕೇರಳದಲ್ಲಿ ಸಿನಗಾಗ್‌ನ ಹೊರಗೆ ನಡೆದ ಮೊದಲ ಮದುವೆ ಇದಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಕೊನೆಯ ಯಹೂದಿ ವಿವಾಹವು 2008 ರಲ್ಲಿ ನಡೆದಿತ್ತು. ಸುಮಾರು ಎರಡು ದಶಕಗಳ ನಂತರ ಮಟ್ಟಂಚೇರಿಯ ತೆಕ್ಕುಂಭಾಗಂ ಸಿನಗಾಗ್‌ನಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಸಿನಗಾಗ್‌ನೊಳಗೆ ಭಾಗವಹಿಸುವವರ ಸಂಖ್ಯೆ ಸೀಮಿತವಾಗಿರುವುದರಿಂದ, ಇತರ ಕುಟುಂಬ ಸದಸ್ಯರಿಗೂ ಆಚರಣೆಗಳಲ್ಲಿ ಸಾಕ್ಷಿಯಾಗಲು ಅವಕಾಶ ನೀಡುವ ಸಲುವಾಗಿ ಖಾಸಗಿ ರೆಸಾರ್ಟ್‌ನಲ್ಲಿ ಸಮಾರಂಭ ನಡೆಸಲು ಕುಟುಂಬಗಳು ನಿರ್ಧರಿಸಿದ್ದವು.
ಕೆಲವು ಇತಿಹಾಸಕಾರರ ಪ್ರಕಾರ, ಕೇರಳವನ್ನು ತಲುಪಿದ ಮೊದಲ ಯಹೂದಿಗಳು ವ್ಯಾಪಾರಿಗಳು. ಅವರು ರಾಜ ಸೊಲೊಮೋನನ ಕಾಲದಲ್ಲಿ ಬಂದರು. ಅಂದರೆ 2 ಸಾವಿರ ವರ್ಷಗಳ ಹಿಂದೆ. ಈಗ ರಾಜ್ಯದಲ್ಲಿ ಉಳಿದಿರುವುದು ಕೆಲವೇ ಕುಟುಂಬಗಳು ಮಾತ್ರ.
ಮುಸ್ಲಿಂ ಯುವಕನ ಜೊತೆಗಿನ ಮಗಳ ಮದುವೆ ರದ್ದುಗೊಳಿಸಿದ ಬಿಜೆಪಿ ನಾಯಕ: ಉತ್ತರಾಖಂಡದ ಪೌರಿ ಪುರಸಭೆ ಅಧ್ಯಕ್ಷ ಯಶಪಾಲ್ ಬೇನಂ ಎಂಬವರ ಪುತ್ರಿಯ ವಿವಾಹವನ್ನು ರದ್ದು ಮಾಡಲಾಗಿದೆ. ಮುಸ್ಲಿಂ ಯುವಕನ ಜತೆ ನಡೆಯಬೇಕಿದ್ದ ವಿವಾಹಕ್ಕೆ ಭಾರಿ ಆಕ್ಷೇಪ ಎದುರಾಗಿತ್ತು. ಈ ಕುರಿತು ಯಶಪಾಲ್ ಬೇನಂ ಅವರೇ ಶನಿವಾರ (ಮೇ20) ಸ್ಪಷ್ಟಪಡಿಸಿದ್ದರು. ಹಿಂದೂ ಸಂಘಟನೆಗಳ ಒತ್ತಡ ಹಾಗೂ ಅಸಮಾಧಾನಕ್ಕೆ ಮಣಿದು ಮೇ 28 ರಂದು ನಡೆಯಬೇಕಿದ್ದ ಮಗಳ ಮದುವೆಯನ್ನು ರದ್ದು ಮಾಡಿರುವುದಾಗಿ ಬೇನಂ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಶಪಾಲ್ ತಮ್ಮ ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದೆ. ಆದರೆ ಮದುವೆಗೆ ಸಾಮಾಜಿಕ ಮಾಧ್ಯಮ ಮತ್ತು ಹಿಂದೂ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೀತಿಯನ್ನು ಗಮನದಲ್ಲಿ ಇಟ್ಟುಕೊಂಡು ಮದುವೆ ರದ್ದು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದರು. ನಾನು ನನ್ನ ಮಗಳ ಮದುವೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದು, ಈ ಎಲ್ಲ ಕಾರಣಗಳಿಗಾಗಿ ನಿಗದಿಯಾಗಿದ್ದ ಮದುವೆಯನ್ನು ಈಗ ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಮುಸ್ಲಿಂ ಯುವಕನೊಂದಿಗೆ ನಡೆಯಬೇಕಿದ್ದ ಮಗಳ ಮದುವೆ ರದ್ದುಗೊಳಿಸಿದ ಬಿಜೆಪಿ ನಾಯಕ