ತಿರುವನಂತಪುರ(ಕೇರಳ):ಕೆಲ ದಿನಗಳಿಂದ 50 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳನ್ನು ದಾಖಲಿಸುತ್ತಿದ್ದ ಕೇರಳದಲ್ಲಿ ಸೋಮವಾರ 42 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದೊಂದು ವಾರದಿಂದ ಏರಿಕೆ ಕಾಣುತ್ತಿದ್ದ ಸೋಂಕು ಸೋಮವಾರ ಅಲ್ಪ ಇಳಿಕೆ ಕಂಡಿದೆ.
ಸೋಮವಾರ ಒಂದೇ ದಿನದಲ್ಲಿ 42,154 ಪ್ರಕರಣ ದಾಖಲಾಗಿ, ರಾಜ್ಯದಲ್ಲಿ 3,57,552 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ 24 ಗಂಟೆ ಅವಧಿಯಲ್ಲಿ 14 ಜನರು ಕೊರೊನಾಗೆ ಬಲಿಯಾಗಿದ್ದಾರೆ. 38,458 ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಿಂದ 56,12,993 ಜನರು ಗುಣಮುಖರಾದಂತಾಗಿದೆ.