ತಿರುವನಂತಪುರಂ :ಕೊರೊನಾ ನಿರ್ವಹಣೆಯಲ್ಲಿ ಕೇರಳ ರಾಜ್ಯವು ಸಂಕಷ್ಟ ಎದುರಿಸುತ್ತಿದೆ. ಮುಂಬರುವ ದಿನಗಳಲ್ಲಿ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಕಳೆದ ಕೆಲ ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.25ರಷ್ಟು ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಕೆಲವು ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. ಸೋಂಕಿತರು ಬೆಡ್ ಸೌಲಭ್ಯ, ವೆಂಟಿಲೇಟರ್ಗಳಿಗಾಗಿ ಪರದಾಡುತ್ತಿದ್ದಾರೆ. ಉತ್ತರ ಭಾರತದ ರಾಜ್ಯಗಳಂತೆಯೇ ಕೇರಳವು ಸಹ ಭಾರೀ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರಸ್ತುತ, ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ತ್ರಿಶೂರ್ನಲ್ಲಿ ಶೇ. 32.66ರಷ್ಟು ಕೊರೊನಾ ಸೋಂಕಿತರಿದ್ದು, ಮಲಪ್ಪುರಂ ಮತ್ತು ಕೊಟ್ಟಾಯಂನಲ್ಲಿ ಶೇ. 30ರಷ್ಟು ಪ್ರಕರಣ ದಾಖಲಾಗಿವೆ. ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆ ಸೇರಿ ಏಳು ಜಿಲ್ಲೆಗಳಲ್ಲಿ ಶೇ. 24 ರಷ್ಟು ಪಾಸಿಟಿವ್ ಕೇಸ್ ಪತ್ತೆಯಾಗಿವೆ.
ಇದನ್ನು ಓದಿ:ಭಾರತಕ್ಕೆ ಬೆಂಬಲ ಹೆಚ್ಚಿಸಲು ವಿಶ್ವಸಂಸ್ಥೆ ಸಿದ್ಧವಾಗಿದೆ: UN ಪ್ರಧಾನ ಕಾರ್ಯದರ್ಶಿ