ತಿರುವನಂತಪುರಂ (ಕೇರಳ):ಯಾವುದೇ ದೂಷಣೆ ಕೇಳಿ ಬಂದರೆ ಅದಕ್ಕೆ ಶಿರಚ್ಛೇದವೇ ಶಿಕ್ಷೆ ಎಂಬುದನ್ನು ಮಕ್ಕಳಿಗೆ ಮದರಸಾಗಳಲ್ಲಿ ಕಲಿಸಿಕೊಡಲಾಗುತ್ತದೆ. ಇದೇ ದೇವರ ನಿಯಮ ಎಂದೂ ಹೇಳಿಕೊಡಲಾಗುತ್ತದೆ ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ತಿಳಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಮುಸ್ಲಿಂ ಮತಾಂಧರು ಟೈಲರ್ ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ ದುಷ್ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಇಂತಹ ರೋಗಲಕ್ಷಣಗಳು ಕಂಡು ಬಂದಾಗ ಮಾತ್ರವೇ ನಾವು ಚಿಂತಿಸುತ್ತೇವೆ. ಆದರೆ, ಅದರ ಆಳವನ್ನು ತಿಳಿದುಕೊಳ್ಳಲು ನಾವು ನಿರಾಕರಿಸುತ್ತೇವೆ. ಆದ್ದರಿಂದ ಮದರಸಾಗಳಲ್ಲಿ ಮಕ್ಕಳಿಗೆ ಏನು ಕಲಿಸಿಕೊಡುತ್ತಾರೆ ಎಂಬುವುದನ್ನು ಪರಿಶೀಲಿಸುವ ಅಗತ್ಯವಿದೆ" ಎಂದು ಹೇಳಿದರು.