ತಿರುವನಂತಪುರಂ(ಕೇರಳ): ದೇಶದ ಮೊದಲ ಡ್ರೋನ್ ಫೋರೆನ್ಸಿಕ್ ಲ್ಯಾಬ್ ಅನ್ನು ಕೇರಳದಲ್ಲಿ ಸ್ಥಾಪಿಸಲಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರಂನಲ್ಲಿ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಈ ಫೋರೆನ್ಸಿಕ್ ಲ್ಯಾಬ್ನ ಮುಖಾಂತರ ಅವಶೇಷಗಳಿಂದಲೂ ಡ್ರೋನ್ ಅನ್ನು ಗುರ್ತಿಸಬಹುದಾಗಿದೆ ಮತ್ತು ಅದರಿಂದ ಡೇಟಾವನ್ನು ಸಂಗ್ರಹಿಸಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ದೇಶವಿರೋಧಿ ಚಟುವಟಿಕೆಗಳಿಗೆ ಡ್ರೋನ್‌ಗಳ ಬಳಕೆ ಹೆಚ್ಚುತ್ತಿರುವುದರಿಂದ ಮತ್ತು ಇಂತಹ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ವಿಧಿವಿಜ್ಞಾನ ಪ್ರಯೋಗಾಲಯವು ನಮಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇರಳ ಪೊಲೀಸ್ ಸೈಬರ್ ಡೋಮ್ ಅಡಿಯಲ್ಲಿ ಡ್ರೋನ್ ಫೋರೆನ್ಸಿಕ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದ್ದು, ಇಲ್ಲಿನ ತಂತ್ರಜ್ಞಾನದ ಮೂಲಕ ವಿವಿಧ ಡ್ರೋನ್‌ಗಳನ್ನು ಗುರ್ತಿಸಬಹುದಾಗಿದೆ ಮತ್ತು ಅವುಗಳಿಂದ ಡೇಟಾವನ್ನು ಸಂಗ್ರಹಿಸಬಹುದಾಗಿದೆ.